ಯಾವುದೇ ನಿಯಂತ್ರಣ ಇಲ್ಲದೇ ದಿನಕ್ಕೆ 1 ಜಿಬಿ ಡೇಟಾ ಬೇಕು ಎನ್ನುವವರಿಗೆ ತಿಂಗಳಿಗೆ 549 ರೂಪಾಯಿಯ ಆಫರ್‌ ಪ್ರಕಟಿಸಲಾಗಿದೆ.

ನವದೆಹಲಿ(ಮಾ.05): ರಿಲಯನ್ಸ್‌ ಜಿಯೋಗೆ ಸಡ್ಡು ಹೊಡೆಯುವ ಸಲುವಾಗಿ ಭಾರ್ತಿ ಏರ್‌'ಟೆಲ್‌ ಹೊಸ ಆಫರ್‌ ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

345 ರೂಪಾಯಿಗ 28 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 1 ಜಿಬಿ 4ಜಿ ಡೇಟಾ, ಜತೆಗೆ ಉಚಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆ ನೀಡುವುದಾಗಿ ಪ್ರಕಟಿಸಿದೆ. ಆದರೆ, ಇದನ್ನು ಹಗಲಿನಲ್ಲಿ (ಮುಂಜಾನೆ 6ರಿಂದ ರಾತ್ರಿ 12) 500 ಎಂಬಿ ಮತ್ತು ರಾತ್ರಿ(12ರಿಂದ ಮುಂಜಾನೆ 6)ವೇಳೆ 500 ಎಂಬಿ ಯಂತೆ ಬಳಕೆ ಮಾಡಿಕೊಳ್ಳಬೇಕು.

ಯಾವುದೇ ನಿಯಂತ್ರಣ ಇಲ್ಲದೇ ದಿನಕ್ಕೆ 1 ಜಿಬಿ ಡೇಟಾ ಬೇಕು ಎನ್ನುವವರಿಗೆ ತಿಂಗಳಿಗೆ 549 ರೂಪಾಯಿಯ ಆಫರ್‌ ಪ್ರಕಟಿಸಲಾಗಿದೆ. ಪ್ರತಿ ದಿನಕ್ಕೆ ಒಂದು ಜಿಬಿಯಂತೆ 28 ಜಿಬಿ ಡೇಡಾ ಲಭ್ಯವಾಗಲಿದೆ.

 ಇನ್ನು ಜಿಯೋ ಪ್ರೈಮ್ ಸದಸ್ಯರಾದವರು 303ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ ಒಂದು ತಿಂಗಳು ಒಂದು ತಿಂಗಳು ಉಚಿತ ಕರೆ ಜೊತೆಗೆ ಯಾವುದೇ ನಿಯಂತ್ರಣವಿಲ್ಲದೆ ಪ್ರತಿದಿನ ಒಂದು ಜಿಬಿ 4ಜಿ ಡೇಟಾ ಬಳಸಬಹುದಾಗಿದೆ.