ಮಹತ್ವದ ನಿರ್ಧಾರವೊಂದರಿಂದ ಹಿಂದೆ ಸರಿದ ಕೇಂದ್ರ : ರೈತರ ಆದಾಯಕ್ಕೆ ಬೀಳುತ್ತಾ ಕತ್ತರಿ

After Protests by Jains, Govt Cancels Export of Sheep, Goats to UAE
Highlights

ಜೈನ ಸಮುದಾಯದ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಈ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದೆ.  ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ಕ್ಕೆ ಕುರಿ ಮತ್ತು ಆಡುಗಳನ್ನು ರಪ್ತು ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. 

ನಾಗ್ಪುರ: ಜೈನ ಸಮುದಾಯದ ವಿರೋಧದ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ಕ್ಕೆ ಕುರಿ ಮತ್ತು ಆಡುಗಳನ್ನು ರಪ್ತು ಮಾಡುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. 

ರೈತರ ಆದಾಯ ಹೆಚ್ಚಳ ಮತ್ತು ಸ್ವ ಉದ್ಯೋಗ ಸೃಷ್ಟಿಸುವ ನಿಟ್ಟಿನಿಂದ ನಾಗ್ಪುರ ವಿಮಾನ ನಿಲ್ದಾಣದಿಂದ ಯುಎಇಗೆ ಶನಿವಾರ 2,000 ಕುರಿ ಮತ್ತು ಆಡು ಸಾಗಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಯೋಜಿಸಲಾಗಿತ್ತು. 

ಆದರೆ, ಈ ಕ್ರಮ ವಿರೋಧಿಸಿ ಜೈನ ಸಮುದಾಯದ ಮುಖಂಡರು ಆರ್‌ಎಸ್‌ಎಸ್‌ ಮುಖ್ಯಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಜೊತೆ ಮಾತುಕತೆ ಬಳಿಕ ರಫ್ತನ್ನು ಅನಿರ್ದಿಷ್ಟಅವಧಿಗೆ ಮುಂದೂಡಲಾಗಿದೆ.

loader