ಪ್ರಣಬ್ ಆಯ್ತು ಇದೀಗ ರತನ್‌ಗೆ ಸಂಘದ ಸಾಂಗತ್ಯಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ರತನ್ ಟಾಟಾ ಭಾಗಿಆಗಸ್ಟ್ 24 ರಂದು ನಡೆಯಲಿರುವ ಆರ್‌ಎಸ್‌ಎಸ್‌ ಕಾರ್ಯಕ್ರಮಸಂಘದ ಪ್ರಚಾರಕ ನಾನಾ ಪಾಲ್ಕರ್ ಜನ್ಮಶತಮಾನೋತ್ಸವ

ಮುಂಬೈ(ಜು.10): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಕೂಡ ಸಂಘದ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೌದು, ಖ್ಯಾತ ಉದ್ಯಮಿ ರತನ್ ಟಾಟಾ ಮುಂದಿನ ತಿಂಗಳು ಮುಂಬೈಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ನಾನಾ ಪಾಲ್ಕರ್ ಸ್ಮೃತಿ ಸಮಿತಿಯಿಂದ ಆಗಸ್ಟ್ ೨೪ರಂದು ಮುಂಬೈನ ಪಾಲ್ಕರ್ ಜನ್ಮಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಇಬ್ಬರೂ ಗಣ್ಯರು ಭಾಗವಹಿಸಲಿದ್ದಾರೆ.

ಮುಂಬೈ ಮೂಲದ ಎನ್‌ಜಿಒವೊಂದು ಸಂಘದ ಪ್ರಚಾರಕರಾಗಿದ್ದ ನಾನಾ ಪಾಲ್ಕರ್ ಅವರ ಹೆಸರನ್ನು ಹೊಂದಿದ್ದು, ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಮೀಪವೇ ಈ ಕಚೇರಿ ಇದೆ. ರತನ್ ಟಾಟಾ ಈ ಕಚೇರಿಗೆ ಈ ಹಿಂದೆಯೂ ಭೇಟಿ ನೀಡಿದ್ದರು ಎನ್ನಲಾಗಿದೆ.