ನವದೆಹಲಿ[ಡಿ.23]: ದೆಹಲಿ ಮೆಟ್ರೋದ 4ನೇ ಹಂತಕ್ಕೆ ಆಮ್‌ಆದ್ಮಿ ಸರ್ಕಾರ ಹಸಿರು ನಿಶಾನೆ ದೊರೆತ ಬೆನ್ನಲ್ಲೇ ದೆಹಲಿಯ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್‌ ಕುಮಾರ್‌ ತಿವಾರಿ ಅವರು ಆಪ್‌ಗೆ 1.1 ಲಕ್ಷ ದೇಣಿಗೆ ಪ್ರಕಟಿಸಿದ್ದಾರೆ.

ಈ ದೇಣಿಗೆಯನ್ನು ಅನುಮಾನಾಸ್ಪದವಾಗಿ ಮೃತರಾದ ಎಎಪಿಯ ಇಬ್ಬರು ಮಹಿಳಾ ಕಾರ್ಯಕರ್ತೆಯರಾದ ಸಂತೋಷ್‌ ಕೋಲಿ, ಸೋನಿ ಮಿಶ್ರಾ ಕುಟುಂಬಕ್ಕೆ ನೀಡುವುದಾಗಿ ತಿವಾರಿ ಹೇಳಿದ್ದಾರೆ.

ದೆಹಲಿಯಲ್ಲಿ 4ನೇ ಹಂತದ ಮೆಟ್ರೋಗೆ ಹಸಿರು ನಿಶಾನೆ ನೀಡುವ ಮೂಲಕ ನಿಮ್ಮನ್ನು ಆಯ್ಕೆ ಮಾಡಿದ ದಿಲ್ಲಿ ಜನತೆಯನ್ನು ಮಾಲಿನ್ಯದಿಂದ ಮುಕ್ತಿಗೊಳಿಸಿ. ಒಂದೊಮ್ಮೆ ಮೆಟ್ರೋ ಯೋಜನೆಗೆ ಒಪ್ಪಿಗೆ ನೀಡಿದರೆ ದಿಲ್ಲಿ ಸರ್ಕಾರಕ್ಕೆ 1.1 ಲಕ್ಷ ದೇಣಿಗೆ ನೀಡುವುದಾಗಿ ತಿವಾರಿ ಸವಾಲು ಹಾಕಿದ್ದರು.