ಕೇರಳ, ಕೊಡಗು ಜಲಪ್ರಳಯದ ಮುಂದುವರಿಕೆ! ನಾಗಾಲ್ಯಾಂಡ್ ನಲ್ಲಿ ಶುರುವಾಗಿದೆ ಮಳೆಯ ರುದ್ರ ನರ್ತನ! ಭೀಕರ ಮಳೆಗೆ ೧೨ ಜನರ ದುರ್ಮರಣ! ಸಹಾಯ ಕೋರಿ ಟ್ವೀಟ್ ಮಾಡಿದ ನಾಗಾಲ್ಯಾಂಡ್ ಸಿಎಂ!ಕೇಂದ್ರದಿಂದ ಸೂಕ್ತ ನೆರವಿನ ಭರವಸೆ ನೀಡಿದ ರಾಜನಾಥ್ ಸಿಂಗ್
ಕೋಹಿಮಾ(ಆ.31): ಕೇರಳ ಮತ್ತು ಕೊಡಗಿನ ಬೀಕರ ಜಲಪ್ರಾಳಯದ ಬಳಿಕ ಈ ಸ್ಥಿತಿ ಎದುರಿಸುವ ಮುಂದಿನ ನಗರ ಯಾವುದಪ್ಪಾ ಎಂದು ಎಲ್ಲರೂ ತಲೆ ಕೆಡಿಸಿಕೊಂಡು ಕೂತಿದ್ದಾರೆ. ಭೀಕರ ಮಳೆಗೆ ನಮ್ಮೂರೇನಾದ್ರೂ ನಲುಗುತ್ತಾ ಎಂಬುದೇ ಎಲ್ಲರ ಮುಂದಿರುವ ಮುಲಿಯನ್ ಡಾಲರ್ ಪ್ರಶ್ನೆ.
ಅದರಂತೆ ಈಶಾನ್ಯ ಭಾರತದ ಗಡಿ ರಾಜ್ಯ ನಾಗಾಲ್ಯಾಂಡ್ ನಲ್ಲಿ ಇದೀಗ ಮಳೆಯ ರುದ್ರ ನರ್ತನ ಪ್ರಾರಂಭವಾಗಿದೆ. ನಾಗಾಲ್ಯಾಂಡ್ ರಾಜ್ಯಾದ್ಯಂತ ಭೀಕರ ಮಳೆ, ಭೂಕುಸಿತ ಪ್ರಾರಂಭವಾಗಿದ್ದು, ಈಗಾಗಲೇ 12 ಜನರನ್ನು ಬಲಿ ಪಡೆದಿದೆ.
ಈ ಕುರಿತು ಟ್ವೀಟ್ ಮಾಡಿರುವ ನಾಗಾಲ್ಯಾಂಡ್ ಸಿಎಂ ನೈಫ್ಯೂ ರಿಯೋ, ರಾಜ್ಯ ಇದೀಗ ಸಹಾಯದ ನಿರೀಕ್ಷೆಯಲ್ಲಿದೆ ಎಂದು ತಿಳಿಸಿದ್ದಾರೆ. ಭೀಕರ ಮಳೆಗೆ ಈಗಾಗಲೇ ಸುಮಾರು 3 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಇನ್ನು ಸಿಎಂ ರಿಯೋ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥರ್ಥ ಸಿಂಗ್, ಈ ಕೂಡಲೇ ಎನ್ ಡಿಆರ್ ಎಫ್ ತಂಡವನ್ನು ರಾಜ್ಯಕ್ಕೆ ಕಳುಹಿಸುತ್ತಿದ್ದು, ರಾಜ್ಯದ ಜನ ಭಯಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
