1991 ಬ್ಯಾಚ್’ನ ಹಿರಿಯ ಐಏಎಸ್ ಅಧಿಕಾರಿ ಕೆ. ನರಸಿಂಹ ಅವರನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕಡ್ಡಾಯ ನಿವೃತ್ತಿಗೊಳಪಡಿಸಲಾಗಿದೆ.

ನವದೆಹಲಿ (ಜ.18): ನಿನ್ನೆಯಷ್ಟೇ ಸರಿಯಾಗಿ ಕಾರ್ಯನಿರ್ವಹಿಸದ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ ಕೇಂದ್ರ ಸರ್ಕಾರ ಇಂದು ಐಏಎಸ್ ಅಧಿಕಾರಿಯೊಬ್ಬರನ್ನು ಕಡ್ಡಾಯ ನಿವೃತ್ತಿಗೊಳಪಡಿಸಿದೆ.

1991 ಬ್ಯಾಚ್’ನ ಹಿರಿಯ ಐಏಎಸ್ ಅಧಿಕಾರಿ ಕೆ. ನರಸಿಂಹ ಅವರನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕಡ್ಡಾಯ ನಿವೃತ್ತಿಗೊಳಪಡಿಸಲಾಗಿದೆ.

ಸಮರ್ಥವಾಗಿ ಕಾರ್ಯ ನಿರ್ವಹಿಸದ ಜತೆಗೆ ನರಸಿಂಹ ಅವರ ಮೇಲೆ ಭ್ರಷ್ಟಾಚಾರದ ಆರೋಪವು ಇತ್ತು ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ನೇತೃತ್ವದ ನೇಮಕಾತಿ ಸಮಿತಿಯು ನರಸಿಂಹ ಅವರ ಕಡ್ಡಾಯ ನಿವೃತ್ತಿಗೆ ಅನುಮೋದನೆ ನೀಡಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳ ಕಾರ್ಯದಕ್ಷತೆಯ ಅವಲೋಕನ ನಡೆಯುತ್ತಿದೆ. ರಾಜ್ಯ ಸರ್ಕಾರಗಳು ಕೂಡಾ ಈ ಪ್ರಕ್ರಿಯೆಯನ್ನು ನಡೆಸಬೇಕೆಂದು ಕೇಂದ್ರ ಸೂಚಿಸಿದೆ.