ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ನಂತರ ಉತ್ತರ ಪ್ರದೇಶವನ್ನು ಕೇಸರಿಮಯವನ್ನಾಗಿ ಮಾಡಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿದೆ.

ಲಕ್ನೊ (ಜ.07): ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ನಂತರ ಉತ್ತರ ಪ್ರದೇಶವನ್ನು ಕೇಸರಿಮಯವನ್ನಾಗಿ ಮಾಡಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿಗೆ ಹಜ್ ಕಚೇರಿಗೆ ಕೇಸರಿ ಬಣ್ಣವನ್ನು ಹೊಡೆಸಲು ಹೇಳಿದ್ದು ಸುದ್ಧಿಯಾಗಿತ್ತು. ಇದಾದ ಬಳಿಕ ಲಕ್ನೋದಲ್ಲಿರುವ 80 ವರ್ಷಗಳಷ್ಟು ಹಳೆಯದಾಗಿರುವ ಪೊಲೀಸ್ ಸ್ಟೇಷನ್'ಗೆ ಕೇಸರಿ ಬಣ್ಣವನ್ನು ಬಳಿಯುವಂತೆ ಆದೇಶಿಸಿದ್ದಾರೆ.

ಕೇಸರಿ ಬಣ್ಣ ನಿಧಾನವಾಗಿ ಎಲ್ಲವನ್ನು ಆವರಿಸಿಕೊಳ್ಳುತ್ತಿದೆ. ಬುಕ್'ಲೆಟ್, ಸ್ಕೂಲ್ ಬ್ಯಾಗ್ಸ್, ಟವೆಲ್, ಚೇರ್, ಬಸ್ ಹೀಗೆ ಎಲ್ಲವೂ ನಿಧಾನವಾಗಿ ಕೇಸರಿಮಯವಾಗುತ್ತಿದೆ. ಇದೀಗ ಪೊಲೀಸ್ ಸ್ಟೇಷನ್ ಕೂಡಾ ಕೇಸರಿಮಯವಾಗಿದೆ.