ಇದೀಗ ಅಮೆಜಾನ್ ಡಾಟ್ ಕಾಂ ಶಾಪಿಂಗ್ ಪೋರ್ಟಲ್ನಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಡಲಾಗಿದೆ. ಅಮೆಜಾನ್ ಡಾಟ್ ಕಾಂ ಶಾಪಿಂಗ್ ಪೋರ್ಟಲ್‍'ನಲ್ಲಿ Gandhi Flip Flops ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಟ್ಟಿದ್ದು ಇದರ ಬೆಲೆ 16.99 ಡಾಲರ್ ಅಂದರೆ 1157.44 ಆಗಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ(ಜ.15): ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಡೋರ್ ಮ್ಯಾಟ್ ಮಾರಾಟಕ್ಕಿಟ್ಟ ಇ ಕಾಮರ್ಸ್ ಸಂಸ್ಥೆ ‘ಅಮೆಜಾನ್ ಕೆನಡಾ' ವಿವಾದಕ್ಕೊಳಗಾಗಿತ್ತು.
ಇದೀಗ ಅಮೆಜಾನ್ ಡಾಟ್ ಕಾಂ ಶಾಪಿಂಗ್ ಪೋರ್ಟಲ್ನಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಡಲಾಗಿದೆ. ಅಮೆಜಾನ್ ಡಾಟ್ ಕಾಂ ಶಾಪಿಂಗ್ ಪೋರ್ಟಲ್'ನಲ್ಲಿ Gandhi Flip Flops ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಟ್ಟಿದ್ದು ಇದರ ಬೆಲೆ 16.99 ಡಾಲರ್ ಅಂದರೆ 1157.44 ಆಗಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಅಮೆಜಾನ್ ಕೆನಡಾದಲ್ಲಿ ತ್ರಿವರ್ಣ ಧ್ವಜದ ಮಾದರಿಯ ಕಾಲೊರಸುವ ಮಾರಾಟಕ್ಕಿಟ್ಟಿದ್ದಕ್ಕೆ ಭಾರತೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನಂತರ ಸುಷ್ಮಾ ಸ್ವರಾಜ್ ಅವರು ಖಡಕ್ ಎಚ್ಚರಿಕೆ ನೀಡಿದ ಬಳಿಕ ಸಂಬಂಧ ಪಟ್ಟ ಸಂಸ್ಥೆ ಕ್ಷಮೆಯಾಚನೆಯನ್ನು ಮಾಡಿತ್ತು. ವೆಬ್ಸೈಟ್ನಿಂದ ಆ ಉತ್ಪನ್ನವನ್ನು ತೆಗೆದುಹಾಕಿದ್ದರು.
