ಭತ್ಪಾದನೆಗೆ ನೇರ ಬೆಂಬಲ ನೀಡುವ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೋಷಿಯನ್ನಾಗಿ ಮಾಡುವ ಭಾರತದ ಯತ್ನಕ್ಕೆ ಭರ್ಜರಿ ಜಯ ಸಿಕ್ಕಿದೆ. ಇಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗದ ಘೋಷಣೆಯಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಗಳನ್ನು ಹೆಸರಿಸಲಾಗಿದೆ.

ಬೀಜಿಂಗ್(ಸೆ.05): ಭತ್ಪಾದನೆಗೆ ನೇರ ಬೆಂಬಲ ನೀಡುವ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೋಷಿಯನ್ನಾಗಿ ಮಾಡುವ ಭಾರತದ ಯತ್ನಕ್ಕೆ ಭರ್ಜರಿ ಜಯ ಸಿಕ್ಕಿದೆ. ಇಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗದ ಘೋಷಣೆಯಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಗಳನ್ನು ಹೆಸರಿಸಲಾಗಿದೆ.

ಬ್ರಿಕ್ಸ್ ಶೃಂಗದ ಘೋಷಣೆಯಲ್ಲಿ ಪಾಕ್ ಉಗ್ರ ಸಂಘಟನೆಗಳ ಹೆಸರು ದಾಖಲಾಗಿರುವುದು ಇದೇ ಮೊದಲು. ಅದಕ್ಕಿಂತ ಹೆಚ್ಚಾಗಿ, ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನವನ್ನು ಸದಾ ಬೆಂಬಲಿಸುವ ನೆರೆಯ ಚೀನಾ ಕೂಡಾ ಈ ಘೋಷಣೆಯಲ್ಲಿ ಭಾಗಿಯಾಗುವ ಮೂಲಕ ಪಾಕಿಸ್ತಾನಕ್ಕೆ ಭಾರೀ ಮುಖಭಂಗ ಉಂಟು ಮಾಡಿದೆ. ಹೀಗಾಗಿ ಭಯೋತ್ಪಾದನೆ ವಿಷಯದಲ್ಲಿ ಭಾರತ ಮಹತ್ವದ ರಾಜತಾಂತ್ರಿಕ ವಿಜಯ ಸಾಧಿಸಿದಂತಾಗಿದೆ.

ಚೀನಾದ ಕ್ಸಿಯಾಮೆನ್‌ನಲ್ಲಿ ಸೋಮವಾರ ಆರಂಭವಾದ ಬ್ರಿಕ್ಸ್ ಶೃಂಗದಲ್ಲಿ ಪಾಕ್ ಉಗ್ರ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ಸೇರಿ ಹಲವು ಸಂಘಟನೆಗಳನ್ನು ‘ಕ್ಸಿಯಾಮೆನ್ ಘೋಷಣೆ’ಯಲ್ಲಿ ಹೆಸರಿಸಲಾಗಿದೆ. ಈ ಉಗ್ರ ಸಂಘಟನೆಗಳ ಚಟುವಟಿಕೆ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಈವರೆಗೆ ಪಾಕ್ ಪರ ನಿಲುವು ತಳೆಯುತ್ತಿದ್ದ ಪಾಕಿಸ್ತಾನದ ಮಿತ್ರದೇಶ ಚೀನಾ ಕೂಡ ಈ ಘೋಷಣೆಗೆ ದನಿಗೂಡಿಸಿದೆ

ಇದು ಚೀನಾ ನಿಲುವಿನಲ್ಲಿ ಮಹತ್ವದ ಬದಲಾವಣೆ ಆಗಿದ್ದು, ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು ಲಭಿಸಿದೆ. ಒಂದೇ ಕಲ್ಲಲ್ಲಿ ಮೋದಿ ಅವರು ‘ಚೀನಾ’ ಮತ್ತು ‘ಪಾಕಿಸ್ತಾನ’ಗಳೆಂಬ 2 ಹಕ್ಕಿಗಳನ್ನು ಹೊಡೆದಿದ್ದಾರೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತವಲ್ಲದೇ ರಷ್ಯಾ, ಚೀನಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಗಳು ಬ್ರಿಕ್ಸ್‌'ನ ಸದಸ್ಯ ದೇಶಗಳಾಗಿವೆ. ಸಭೆಯ ಆರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ಬಗ್ಗೆ ಅತೀವ ಕಳವಳ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಇತರ ದೇಶಗಳ ನಾಯಕರು ಮೋದಿ ಅವರ ಮಾತಿಗೆ ದನಿಗೂಡಿಸಿದರು. ಬಳಿಕ ಮಾಡಲಾದ ‘ಕ್ಸಿಯಾ ಮೆನ್ ಘೋಷಣೆ’ಯಲ್ಲಿ ‘ತಾಲಿಬಾನ್, ಐಸಿಸ್, ಅಲ್ ಖೈದಾ, ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಆಂದೋ ಲನ, ಉಜ್ಬೇಕಿಸ್ತಾನ್ ಇಸ್ಲಾಮಿಕ್ ಆಂದೋಲನ, ಪಾಕ್ ಮೂಲದ ಹಕಾನಿ ಉಗ್ರ ಜಾಲ, ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ತಹ್ರೀರ್, ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಗಳು ನಡೆಸುತ್ತಿರುವ ಹಿಂಸೆ ಕಳವಳಕಾರಿಯಾಗಿದೆ. ಪ್ರಾದೇಶಿಕ ಭದ್ರತೆಗೆ ಅಪಾಯಕಾರಿಯಾಗಿದೆ. ಒಳ್ಳೆಯದೇ ಅಗಿರಲಿ, ಕೆಟ್ಟದ್ದೇ ಅಗಿರಲಿ ಯಾವುದೇ ರೀತಿಯ ಭಯೋತ್ಪಾದನೆಗೆ ಸಮರ್ಥನೆ ಇಲ್ಲ. ಉಗ್ರ ಸಂಘಟನೆಗಳ ಸಂಘಟಕರು ಮತ್ತು ಅವರ ಪೋಷಕರನ್ನು ಉತ್ತರದಾಯಿಯನ್ನಾಗಿ ಮಾಡಬೇಕು’ ಎಂದು ಸಾರಲಾಯಿತು. ಒಟ್ಟು 17 ಬಾರಿ ‘ಭಯೋತ್ಪಾದನೆ’ ಎಂಬ ಪದವನ್ನು ಘೋಷಣೆಯಲ್ಲಿ ಉಚ್ಚರಿಸಲಾಗಿದೆ.

ಬ್ರಿಕ್ಸ್ ನಿರ್ಣಯಗಳು

1 ಒಳ್ಳೆಯದೇ ಆಗಿರಲಿ, ಕೆಟ್ಟದ್ದೇ ಆಗಿರಲಿ ಯಾವ ಭಯೋತ್ಪಾದನೆಗೂ ಸಮರ್ಥನೆ ಇಲ್ಲ

2 ಉಗ್ರವಾದ ನಿಗ್ರಹಕ್ಕೆ ಎಲ್ಲಾ ರಾಷ್ಟ್ರಗಳೂ ಪರಸ್ಪರ ಸಹಕಾರ ನೀತಿಯನ್ನು ಅನುಸರಿಸಬೇಕು

3 ಉಗ್ರ ಸಂಘಟಕರು, ಅವರ ಪೋಷಕರನ್ನು ಹೊಣೆಗಾರ ಮಾಡಬೇಕು

4 ಅಕ್ರಮ ಹಣ ವರ್ಗ, ಉಗ್ರರಿಗೆ ಹಣ ಪೂರೈಕೆ ತಡೆಗೆ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕರಿಸಬೇಕು

5 ಮತೀಯವಾದ, ಉಗ್ರ ಸಂಘಟನೆಗೆ ಸೇರ್ಪಡೆ, ಶಸ್ತ್ರಾಸ್ತ್ರ ಪೂರೈಕೆ ತಡೆಗೆ ಎಲ್ಲರೂ ನಿ‘ರ್ರಿಸಬೇಕು

6 ಪರಸ್ಪರರ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸದಂತೆ ಅಂತಾರಾಷ್ಟ್ರೀಯ ಸಹಕಾರ ಅಗತ್ಯ