ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿದ ಬಳಿಕ ಮತ್ತೊಮ್ಮೆಯೂ ಎನ್ ಡಿ ಎ ಬಹುಮತ ಗಳಿಸುತ್ತದೆ ಎನ್ನಲಾಗಿದೆ. 

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯಸಭೆಯಲ್ಲಿ ಮ್ಯಾಜಿಕ್ ನಂಬರ್ ತಲುಪಲು ಒಂದೂವರೆ ವರ್ಷ ಕಾಯಬೇಕಾಗಿದೆ. 2020 ರ ನವೆಂಬರ್‌ವರೆಗೆ 75 ರಾಜ್ಯಸಭಾ ಸದಸ್ಯರು ನಿವೃತ್ತರಾಗಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆ ಪೈಕಿ 20 ಸ್ಥಾನಗಳನ್ನು ಗಳಿಸಲು ಸರ್ಕಾರಕ್ಕೆ ಅವಕಾಶವಿದೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 123 ಸ್ಥಾನಗಳು ಬೇಕು. ಸದ್ಯ ಎನ್‌ಡಿಎ 101 ಸದಸ್ಯರನ್ನು ಹೊಂದಿದೆ. ನಾಮನಿರ್ದೇಶಿತ ಸದಸ್ಯರಾದ ಸ್ವಪನ್ ದಾಸ್ ಗುಪ್ತಾ, ಮೇರಿ ಕೋಮ್ ಹಾಗೂ ನರೇಂದ್ರ ಜಾಧವ್ ಮತ್ತು ಮೂವರು ಪಕ್ಷೇತರ ಸದಸ್ಯರ ಬೆಂಬಲ ಗಣನೆಗೆ ತೆಗೆದುಕೊಂಡರೆ ಈ ಸಂಖ್ಯೆ 107 ಕ್ಕೇರುತ್ತದೆ.

ಈ ನಡುವೆ, ಯುಪಿಎ ಸರ್ಕಾರದಿಂದ ನಾಮನಿರ್ದೇಶಿತ ಗೊಂಡಿದ್ದ ಕೆ.ಟಿ.ಎಸ್. ತುಳಸಿ ಅವರು ಮುಂದಿನ ವರ್ಷ ನಿವೃತ್ತರಾಗುತ್ತಿದ್ದಾರೆ. ಆ ಸ್ಥಾನ ತುಂಬಲು ಸರ್ಕಾರಕ್ಕೆ ಅವಕಾಶ ವಿದೆ. ಮಿಕ್ಕಂತೆ ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ 14 ರಾಜ್ಯಗಳಿಂದ 19 ಸೀಟುಗಳನ್ನು ಎನ್‌ಡಿಎ ಸುಲಭವಾಗಿ ಪಡೆಯಲಿದೆ.