Asianet Suvarna News Asianet Suvarna News

ಸುರೇಶ್ ಪ್ರಭು ರಾಜಿನಾಮೆ?

ಉತ್ಕಾಲ್ ರೈಲು ದುರಂತದ ಹಿನ್ನಲೆಯಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಲಾಗಿದೆ. ಹೊಣೆಗಾರಿಕೆ ಹೊರುವುದು ಸರ್ಕಾರದ ಉತ್ತಮ ವ್ಯವಸ್ಥೆ ಎಂದು ಅರುಣ್ ಜೇಟ್ಲಿ ಇದಕ್ಕೆ ಇನ್ನಷ್ಟು ಪುಷ್ಟೀ ನೀಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸುರೇಶ್ ಪ್ರಭುಗೆ ಕಾಯುವಂತೆ ಹೇಳಿದ್ದಾರೆ.

After back to back accidents  railway minister Suresh Prabhu offers to resign says PM Modi  asked me to wait

ನವದೆಹಲಿ (ಆ.23): ಉತ್ಕಾಲ್ ರೈಲು ದುರಂತದ ಹಿನ್ನಲೆಯಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಲಾಗಿದೆ. ಹೊಣೆಗಾರಿಕೆ ಹೊರುವುದು ಸರ್ಕಾರದ ಉತ್ತಮ ವ್ಯವಸ್ಥೆ ಎಂದು ಅರುಣ್ ಜೇಟ್ಲಿ ಇದಕ್ಕೆ ಇನ್ನಷ್ಟು ಪುಷ್ಟೀ ನೀಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸುರೇಶ್ ಪ್ರಭುಗೆ ಕಾಯುವಂತೆ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ನಡೆದ ಉತ್ಕಾಲ್ ಎಕ್ಸ್’ಪ್ರೆಸ್ ರೈಲು ದುರಂತದಲ್ಲಿ 23 ಮಂದಿ ಮೃತಪಟ್ಟಿದ್ದು, 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಅಪಘಾತಕ್ಕೆ ಸುರೇಶ್ ಪ್ರಭು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ರೈಲ್ವೇ ಮಂಡಳಿ ಚೇರ್’ಮನ್ ಎ ಕೆ ಮಿತ್ತಲ್ ಈಗಾಗಲೇ ರಾಜಿನಾಮೆ ಸಲ್ಲಿಸಿದ್ದಾರೆ. ಇದನ್ನು ಸ್ವೀಕರಿಸುವುದೊಂದು ಬಾಕಿಯಿದೆ.

ಉತ್ಕಾಲ್ ದುರಂತದಲ್ಲಿ ಮೃತಪಟ್ಟವರ, ಗಾಯಗೊಂಡವರ ಬಗ್ಗೆ ಅಪಾರ ನೋವಿದೆ. ಬಹಳ ದುಃಖವಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನಾನು ಭೇಟಿ ಮಾಡಿದ್ದೇನೆ. ಪ್ರಧಾನಿಯವರು ಕಾಯುವಂತೆ ಹೇಳಿದ್ದಾರೆ ಎಂದು ಸುರೇಶ್ ಪ್ರಭು ಟ್ವೀಟಿಸಿದ್ದಾರೆ.  

 

Follow Us:
Download App:
  • android
  • ios