ಸುಷ್ಮಾ ಅವರಿಗೆ ಮನವಿ ಮಾಡಿದ್ದ ಪಾಕ್ ಬಾಲಕ ಶಹಬಾಜ್ ಇಕ್ಬಾಲ್ ಎಂಬಾತ, ಅಲ್ಲಾನನ್ನೂ ಬಿಟ್ಟರೆ ನೀವೇ ನಮ್ಮ ಭರವಸೆ ಎಂದು ಮನವಿ ಮಾಡಿಕೊಂಡಿದ್ದ. ಇದೀಗ ಬಾಲಕನ ಮನವಿಗೆ ಸ್ಪಂದಿಸಿದ ಸುಷ್ಮಾ ಅವರು, ತಮಗೆ ಭಾರತಕ್ಕೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ವೈದ್ಯಕೀಯ ವೀಸಾ ಮಂಜೂರು ಮಾಡಲಾಗುವುದು. ಶೀಘ್ರದಲ್ಲೇ ವೀಸಾ ದೊರೆಯಲಿದೆ ಎಂದು ಟ್ವಿಟರ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಹೊಸದಿಲ್ಲಿ (ನ.26): ಈಗಾಗಲೇ ಅನೇಕ ಪಾಕಿಸ್ತಾನದ ನಾಗರಿಕರಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ವೈದ್ಯಕೀಯ ವೀಸಾ ಮಂಜೂರು ಮಾಡಿ ನೆರವು ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದೀಗ ಮತ್ತೆ ನಾಲ್ಕು ಮಂದಿಗೆ ಸಹಾಯದ ಭರವಸೆ ನೀಡಿದ್ದಾರೆ.
ಈ ಬಗ್ಗೆ ಸುಷ್ಮಾ ಅವರಿಗೆ ಪಾಕ್ ಬಾಲಕ ಶಹಬಾಜ್ ಇಕ್ಬಾಲ್ ಎಂಬಾತ, ಅಲ್ಲಾನನ್ನೂ ಬಿಟ್ಟರೆ ನೀವೇ ನಮ್ಮ ಭರವಸೆ ಎಂದು ಮನವಿ ಮಾಡಿಕೊಂಡಿದ್ದ. ಇದೀಗ ಬಾಲಕನ ಮನವಿಗೆ ಸ್ಪಂದಿಸಿದ ಸುಷ್ಮಾ ಅವರು, ತಮಗೆ ಭಾರತಕ್ಕೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ವೈದ್ಯಕೀಯ ವೀಸಾ ಮಂಜೂರು ಮಾಡಲಾಗುವುದು. ಶೀಘ್ರದಲ್ಲೇ ವೀಸಾ ದೊರೆಯಲಿದೆ ಎಂದು ಟ್ವಿಟರ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆಯೂ ಕೂಡ ಅನೇಕ ಪಾಕ್ ನಾಗರಿಕರಿಗೆ ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳಲ ನೆರವು ನೀಡಿ ಸುಷ್ಮಾ ಸ್ವರಾಜ್ ಮಾನವೀಯತೆ ತೋರಿದ್ದರು.
