ನವದೆಹಲಿ: ಹುಬ್ಬಳ್ಳಿಯಲ್ಲಿ ವಿಮಾನ ದೋಷ ಕಂಡ ಕೆಲ ಹೊತ್ತಿನ ಬಳಿಕ ರಾಹುಲ್ ಗಾಂಧಿ ಅವರಿಗೆ ಸ್ವತಃ ಮೋದಿಯವರೇ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ನವದೆಹಲಿ: ಹುಬ್ಬಳ್ಳಿಯಲ್ಲಿ ವಿಮಾನ ದೋಷ ಕಂಡ ಕೆಲ ಹೊತ್ತಿನ ಬಳಿಕ ರಾಹುಲ್ ಗಾಂಧಿ ಅವರಿಗೆ ಸ್ವತಃ ಮೋದಿಯವರೇ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ‘ಮಧ್ಯಾಹ್ನ 2.30ಕ್ಕೆ ರಾಹುಲ್ ಅವರಿಗೆ ಮೋದಿ ದೂರವಾಣಿ ಕರೆ ಮಾಡಿದರು.
‘ನೀವು ಕ್ಷೇಮವಾಗಿದ್ದೀರಾ? ಏನೂ ಆಗಿಲ್ಲ ತಾನೇ?’ ಎಂದು ಮೋದಿ ಅವರು ವಿಚಾರಿಸಿಕೊಂಡರು. ಅದು ಖಾಸಗಿ ಮಾತುಕತೆ ಆಗಿತ್ತು’ ಎಂದು ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ಹೇಳಿವೆ.
ಆದರೆ ರಾಹುಲ್ ಏನು ಉತ್ತರಿಸಿದರು ಎಂಬ ಮಾಹಿತಿ ಲಭಿಸಿಲ್ಲ.
ಇದರಿಂದಾಗಿ ಕೇಂದ್ರ ಸರ್ಕಾರವು ಯಾವುದೇ ವೈಮಾನಿಕ ದೋಷಗಳು ಹಾಗೂ ದುರಂತಗಳನ್ನು ಲಘುವಾಗಿ ಪರಿಗಣಿಸದು ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ ಎಂದು ಅವು ಹೇಳಿಕೊಂಡಿವೆ.
