ಉದಯ್’ಪುರದಲ್ಲಿ ವ್ಯಕ್ತಿಯೋರ್ವರು ತಮ್ಮ 48 ವರ್ಷಗಳ ಸಹಜೀವನವನ್ನು ಅಂತ್ಯಗೊಳಿಸಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಉದಯ್’ಪುರ : ಉದಯ್’ಪುರದಲ್ಲಿ ವ್ಯಕ್ತಿಯೋರ್ವರು ತಮ್ಮ 48 ವರ್ಷಗಳ ಸಹಜೀವನವನ್ನು ಅಂತ್ಯಗೊಳಿಸಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. 80 ವರ್ಷದ ವ್ಯಕ್ತಿ 76 ವರ್ಷದ ಮಹಿಳೆಯನ್ನು ವರಿಸಿದ್ದಾರೆ. ಮಾದ್ರಿ ಪಂಚಾಯತ್’ನಲ್ಲಿ ವಾಸವಿದ್ದ ದೇವದಾಸ್ ಕಲಸುವಾ ಹಾಗೂ ಮಗದು ಬಾಯ್ ಇಬ್ಬರೂ ಕೂಡ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು 48 ವರ್ಷಗಳಿಂದ ಸಹಜೀವನವನ್ನು ನಡೆಸುತ್ತಿದ್ದ ಇಬ್ಬರಿಗೂ ಕೂಡ ಇದೀಗ ವಿವಾಹದ ಯೋಗ ಒಲಿದು ಬಂದಿದೆ. ಗ್ರಾಮಸ್ಥರೆಲ್ಲರೂ ಸೇರಿ ಇದೀಗ ಹಿರಿಯ ಜೀವಗಳನ್ನು ಒಂದು ಗೂಡಿಸಿದ್ದಾರೆ.

ದೇವದಾಸ್ ಅವರಿಗೆ ಈ ಮೊದಲೇ ವಿವಾಹವಾಗಿದ್ದು, ಮೊದಲ ಪತ್ನಿ ಚಂಪಾಬಾಯಿ ತಮ್ಮ ಪುತ್ರನೊಂದಿಗೆ ವಾಸವಾಗಿದ್ದಾರೆ. ದೇವದಾಸ್ ಅವರ ಇಬ್ಬರು ಪತ್ನಿಯರೂ ಕೂಡ ಅನ್ಯೋನ್ಯವಾಗಿದ್ದಾರೆ.