Asianet Suvarna News Asianet Suvarna News

'ಟ್ರೀ ಮ್ಯಾನ್' ಎಂದೇ ಪರಿಚಿತನಾಗಿರುವ ಈ ವ್ಯಕ್ತಿಗೆ ವಿಚಿತ್ರ ರೋಗ; ವೈದ್ಯಲೋಕಕ್ಕೆ ಸವಾಲು

ಕಳೆದ 10 ವರ್ಷಗಳಿಂದ ಈ ವ್ಯಕ್ತಿ ವಿಚಿತ್ರ ರೋಗಗಳಿಂದ ಬಳಲುತ್ತಿದ್ದಾನೆ. ದೇಹದ ಕೈ ಹಾಗೂ ಕಾಲುಗಳ ಚರ್ಮ ಮರದ ಕೊರಡಿನಂತೆ ಬೆಳೆಯುವ ವಿಚಿತ್ರ ರೋಗವಿದು. ವೈದ್ಯಕೀಯ ಭಾಷೆಯಲ್ಲಿ ಎಪಿಡರ್ಮೋಡಿಸ್'ಪ್ಲಾಸಿಯಾ ವರಸಿಫಾರ್ಮಿಸ್ ಎಂದು ಇದರ ಹೆಸರು. ವೈದ್ಯಲೋಕಕ್ಕೆ ಇದೊಂದು ಸವಾಲಾಗಿದೆ.

After 24 surgeries Bangladesh  tree man relapses
  • Facebook
  • Twitter
  • Whatsapp

ಬೆಂಗಳೂರು (ಫೆ.02): ಕಳೆದ 10 ವರ್ಷಗಳಿಂದ ಈ ವ್ಯಕ್ತಿ ವಿಚಿತ್ರ ರೋಗಗಳಿಂದ ಬಳಲುತ್ತಿದ್ದಾನೆ. ದೇಹದ ಕೈ ಹಾಗೂ ಕಾಲುಗಳ ಚರ್ಮ ಮರದ ಕೊರಡಿನಂತೆ ಬೆಳೆಯುವ ವಿಚಿತ್ರ ರೋಗವಿದು. ವೈದ್ಯಕೀಯ ಭಾಷೆಯಲ್ಲಿ 'ಎಪಿಡರ್ಮೋಡಿಸ್'ಪ್ಲಾಸಿಯಾ ವರಸಿಫಾರ್ಮಿಸ್' ಎಂದು ಇದರ ಹೆಸರು. ವೈದ್ಯಲೋಕಕ್ಕೆ ಇದೊಂದು ಸವಾಲಾಗಿದೆ.

 

ಈ ವ್ಯಕ್ತಿಯ ಹೆಸರು ಅಬುಲ್ ಬಜಾಂದರ್. ಟ್ರೀ ಮ್ಯಾನ್ ಎಂದೇ ಇವರು ಪರಿಚಿತ. ಅಬುಲ್‌ ಬಜಾಂದರ್‌ಗೆ ಢಾಕಾದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಒಂದು ವರ್ಷಕ್ಕೂ ಅಧಿಕ ಕಾಲ ಸರಕಾರದ ವೆಚ್ಚದಲ್ಲಿಯೇ ಚಿಕಿತ್ಸೆ ದೊರೆತಿದೆ. ಸುಮಾರು 24 ಶಸ್ತ್ರ ಚಿಕಿತ್ಸೆ ಮಾಡಿದರೂ ವೈದ್ಯಲೋಕಕ್ಕೆ ಸವಾಲಾಗಿದೆ ಈ ರೋಗ. ಮೊದ ಮೊದಲು ಗುಣಮುಖರಾದಂತೆ ಕಾಣುತ್ತಿದ್ದ  ವ್ಯಕ್ತಿಗೆ ಇದೀಗ ರೋಗ ಮತ್ತೆ ಮರುಕಳಿಸಿದ್ದು ಜೀವನದಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದಾರೆ.

 

Follow Us:
Download App:
  • android
  • ios