ಕಳೆದ 16 ವರ್ಷಗಳಿಂದ ನಿರ್ಮಾಣ ಮಾಡುತ್ತಿದ್ದ ಶಾಶ್ವತ್ ಧಾಮ ನಿರ್ಮಾಣ ಕಾಮಗಾರಿಗೆ ತೆರೆ ಬಿದ್ದಿದೆ. ನೇಪಾಳ ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ ಇಂದು ಶಾಶ್ವತ ಧಾಮವನ್ನು ಉದ್ಘಾಟಿಸಿದ್ದಾರೆ.
ನವಾಲ್ ಪಾರಸಿ (ಮಾ.09): ಕಳೆದ 16 ವರ್ಷಗಳಿಂದ ನಿರ್ಮಾಣ ಮಾಡುತ್ತಿದ್ದ ಶಾಶ್ವತ್ ಧಾಮ ನಿರ್ಮಾಣ ಕಾಮಗಾರಿಗೆ ತೆರೆ ಬಿದ್ದಿದೆ. ನೇಪಾಳ ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ ಇಂದು ಶಾಶ್ವತ ಧಾಮವನ್ನು ಉದ್ಘಾಟಿಸಿದ್ದಾರೆ.
ಗೌತಮ ಬುದ್ಧನ ಹುಟ್ಟುನೆಲದಲ್ಲಿ ಈ ಶಾಶ್ವತ ಧಾಮವನ್ನು ನಿರ್ಮಾಣ ಮಾಡಲಾಗಿದೆ. ಈ ಪುಣ್ಯಭೂಮಿ ಶಾಂತಿ ಮತ್ತು ಸಾಮರಸ್ಯವನ್ನು ಹರಡಲು ಸಹಾಯಕವಾಗಲಿದೆ. ನಮ್ಮ ದೇಶದಲ್ಲಿ ಆಯುರ್ವೇದ ಮತ್ತು ಯೋಗ ಬಹಳ ಅಭಿವೃದ್ಧಿಯಾಗಿದೆ. ಜೊತೆಗೆ ತನ್ನದೇ ಆದ ಐತಿಹಾಸಿಕ ವೈಭವವನ್ನು ಹೊಂದಿದೆ. ನಮ್ಮ ದೇಶ ಧಾರ್ಮಿಕ ಸಹಿಷ್ಟುತೆ ಮತ್ತು ಜನಾಂಗೀಯ ಏಕೀಕರಣಕ್ಕೆ ಉದಾಹರಣೆಯಾಗಿದೆ ಎಂದು ಅಧ್ಯಕ್ಷೆ ಬಿಧ್ಯಾದೇವಿ ಭಂಡಾರಿ ಹೇಳಿದ್ದಾರೆ.
