ಆಫ್ರಿಕನ್ನರಿಗೆ ಕಪ್ಪು ದೇವರು, ಯುವಕರಿಗೆ ಹೆಣ್ಣು ದೇವರು ಇಷ್ಟ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 29, Jul 2018, 3:48 PM IST
Africans Most believe Black God  says survey
Highlights

  • ಅಮೆರಿಕನ್ನರು ಆರಾಧಿಸುವ ದೇವರು ಸೌಮ್ಯ ಸ್ವಭಾವದ, ಸುಂದರ ಮುಖವನ್ನು ಹೊಂದಿರುತ್ತದೆ
  • ಆಫ್ರಿಕನ್ನರು ಹೆಚ್ಚು ನಂಬುವುದು ಕಪ್ಪಗಿರುವ ದೇವರನ್ನು 

ಸಂಪ್ರದಾಯವಾದಿಗಳು ಸರ್ವಾಧಿಕಾರಿ ದೇವರನ್ನು ಆರಾಧಿಸಿದರೆ, ಉದಾರವಾದಿಗಳು ಅಂದರೆ ಯುವಜನತೆ ಸಿಉೀಯರ ಮುಖಭಾವವಿರುವ ಸೌಮ್ಯಭಾವದ ದೇವರನ್ನು ಹೆಚ್ಚು ಇಷ್ಟಪಡುತ್ತಾರಂತೆ. ಇದು ವಿಚಿತ್ರ ಎನಿಸಬಹುದು ಆದರೆ ಇಂಥದ್ದೊಂದು ಅಂಶ ಸಮೀಕ್ಷೆ ವೇಳೆ ಬಯಲಾಗಿದೆ.

ಈ ನೂತನ ಸಮೀಕ್ಷೆ ಪ್ರಕಾರ ಆಧುನಿಕ ಕ್ರಿಶ್ಚಿಯನ್ ಅಮೆರಿಕನ್ನರು ಆರಾಧಿಸುವ ದೇವರ ಚಿತ್ರ ಕಿರಿಯರಂತೆ ಭಾಸವಾಗುವ ಸೌಮ್ಯ ಸ್ವಭಾವದ, ಸುಂದರ ಮುಖವನ್ನು ಹೊಂದಿರುತ್ತದೆ. ಸಮೀಕ್ಷೆಯಲ್ಲಿ ಸುಮಾರು 511 ಅಮೆರಿಕನ್ನರು ಭಾಗವಹಿಸಿದ್ದು, ಅದರಲ್ಲಿ 300ಕ್ಕೂ ಹೆಚ್ಚು ಸರ್ವಾಧಿಕಾರಿ ಮುಖದ,  ಹೆಚ್ಚು ವಯಸ್ಸಾದಂತಿರುವ ದೇವರ ಚಿತ್ರಗಳಿಗಿಂತ ದಯಾ ಸ್ವಭಾವದ, ಪ್ರೀತಿಯನ್ನು ಅಭಿವ್ಯಕ್ತಿಸುವ ಮುಖದ ದೇವರ ಚಿತ್ರವನ್ನೇ ಆಯ್ಕೆ ಮಾಡಿದ್ದರು. ಹಾಗೆಯೇ ಸಂಪ್ರದಾಯವಾದಿಗಳು ‘ಶ್ರೀಮಂತ, ವಯಸ್ಸಾದ, ಪುರುಷರ ಹಾವಭಾವ ವ್ಯಕ್ತಪಡಿಸುವ ದೇವರ ಚಿತ್ರಗಳನ್ನು ಆಯ್ಕೆ ಮಾಡಿದ್ದರು.

ಸಂಶೋಧಕ ಜಶುವಾ ಜಾಕ್‌ಸನ್ ಎಂಬವರ ಪ್ರಕಾರ, ‘ಜನರು ತಮ್ಮ ಅಗತ್ಯಗಳಿಗೆ ತಕ್ಕಂತ ದೇವರ ಬಗ್ಗೆ ಒಲವನ್ನು ಹೊಂದಿರುತ್ತಾರೆ. ಆಫ್ರಿಕನ್ನರು ಹೆಚ್ಚು ಕಪ್ಪಗಿರುವ ದೇವರನ್ನು ಆರಾಧಿಸುತ್ತಾರೆ. ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವವರು ಆಕರ್ಷಕ ದೇವರನ್ನು ಆರಾಧಿಸುತ್ತಾರೆ’ ಎನ್ನುತ್ತಾರೆ. ಒಟ್ಟಿನಲ್ಲಿ ಜನರು ತಮ್ಮ ಅಗತ್ಯಕ್ಕನುಗುಣವಾಗಿ ತಮಗೆ ಹೊಂದಾಣಿಕೆಯಾಗುವ ದೇವರನ್ನೇ ಆರಾಧಿಸುತ್ತಾರಂತೆ.

[ಸಮೀಕ್ಷೆ ಸಂಗತಿ]

 

loader