ಆಫ್ಘಾನ್‌ನಲ್ಲಿ ಊಟ ಚಿನ್ನಕ್ಕಿಂತ ದುಬಾರಿ, ದೇಶದಲ್ಲಿ ಡ್ರೋನ್ ನಿಯಮ ಜಾರಿ; ಆ.26ರ ಟಾಪ್ 10 ಸುದ್ದಿ!

ಆಫ್ಘಾನಿಸ್ತಾನದಲ್ಲಿ ಒಂದು ಪ್ಲೇಟ್ ಊಟದ ಬೆಲೆ 7,400 ರೂಪಾಯಿ ಆಗಿದೆ. ಇತ್ತ ಕರ್ನಾಟಕದಲ್ಲಿ ಗ್ಯಾಂಗ್ ರೇಪ್ ಸಂತ್ರಸ್ತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಹೊಸ ಡ್ರೋನ್ ನಿಯಮ ಜಾರಿ ಮಾಡಲಾಗಿದೆ.  ಕಿಚ್ಚ ಸುದೀಪ್ ಡಿಫರೆಂಟ್ ಹೇರ್‌ ಸ್ಟೈಲ್,
ಸ್ವಾರಸ್ಯಕರ ಪ್ರಸಂಗವೊಂದನ್ನು ಬಹಿರಂಗಪಡಿಸಿದ ನೀರಜ್ ಡೋಪ್ರಾ ಸೇರಿದಂತೆ ಆಗಸ್ಟ್ 26ರ ಟಾಪ್  10 ಸುದ್ದಿ ವಿವರ ಇಲ್ಲಿವೆ.

Afghanistan crisis to New Drone policy top 10 news of August 26 ckm

ರೇಪ್ ಸಂತ್ರಸ್ತೆ ಅಷ್ಟೊತ್ತಿಗೆ ಆ ನಿರ್ಜನ ಪ್ರದೇಶಕ್ಕೆ ಹೋಗ್ಬಾರದಿತ್ತು: ಗೃಹ ಸಚಿವ ವಿವಾದಾತ್ಮಕ ಹೇಳಿಕೆ

Afghanistan crisis to New Drone policy top 10 news of August 26 ckm

ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೀರಿನ ಬಾಟಲಿಗೆ 3,000 ರೂ, ಒಂದು ಪ್ಲೇಟ್ ಊಟಕ್ಕೆ 7,400 ರೂ; ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ!

Afghanistan crisis to New Drone policy top 10 news of August 26 ckm

 ಆಫ್ಘಾನಿಸ್ತಾನ ಇದೀಗ ಅಕ್ಷರಶಃ ನಕರ ದೇಶವಾಗಿ ಮಾರ್ಪಟ್ಟಿದೆ. ಅತೀ ಹೆಚ್ಚು ನೈಸರ್ಗಿಕ ಸಂಪನ್ಮೂಲ, ಆದಾಯದ ಮೂಲ ಹೊಂದಿರುವ ಆಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. ಕಣಿವೆ, ನದಿ, ಸರೋವರ ಸೇರಿದಂತೆ ಅತ್ಯಂತ ಸುಂದರ ದೇಶವೊಂದು ಉಗ್ರರ ಅಧಿಪತ್ಯದಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೀರು, ಆಹಾರ ತಿನಿಸುಗಳ ಬೆಲೆ ಚಿನ್ನಕ್ಕಿಂತಲೂ ದುಬಾರಿಯಾಗಿದೆ.

ಡ್ರೋನ್ ಹಾರಿಸುವ ಮುನ್ನ ಇತ್ತ ಗಮನಿಸಿ, ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ!

Afghanistan crisis to New Drone policy top 10 news of August 26 ckm

ಕೇಂದ್ರ ಸರ್ಕಾರ ಡ್ರೋನ್‌ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಸಂಬಂಧ ಆಗಸ್ಟ್ 25 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಇದರಲ್ಲಿ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಎಲ್ಲಾ ಡ್ರೋನ್‌ಗಳ ಆನ್‌ಲೈನ್ ನೋಂದಣಿಯನ್ನು ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಮೂಲಕ ಮಾಡಲಾಗುತ್ತದೆ.

ಫೈನಲ್‌ನಲ್ಲಿ ನನ್ನ ಜಾವೆಲಿನ್‌ ಪಾಕ್ ಅಥ್ಲೀಟ್‌ ಬಳಿಯಿತ್ತು: ನೀರಜ್ ಚೋಪ್ರಾ

Afghanistan crisis to New Drone policy top 10 news of August 26 ckm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಫೈನಲ್‌ ವೇಳೆ ನಡೆದ ಸ್ವಾರಸ್ಯಕರ ಪ್ರಸಂಗವೊಂದನ್ನು ಬಹಿರಂಗ ಪಡಿಸಿದ್ದಾರೆ.

ನಾನು, ವಿಷ್ಣು 6 ತಿಂಗಳು ಗಂಜಿ ಕುಡಿದು ಬದುಕಿದ್ದೆವು: 'ಯಜಮಾನ'ನ ಕತೆ ತೆರೆದಿಟ್ಟ ಭಾರತಿ!

Afghanistan crisis to New Drone policy top 10 news of August 26 ckm

ವಿಷ್ಣುವರ್ಧನ್‌ ಮತ್ತು ನಾನು ಸ್ಟಾರ್‌ಗಳಾಗಿದ್ದೆವು. ಆದರೆ ಒಂದು ಹಂತದಲ್ಲಿ ನಾವಿಬ್ಬರು ಮತ್ತು ನಮ್ಮಿಬ್ಬರು ಮಕ್ಕಳು ಆರು ತಿಂಗಳು ಗಂಜಿ ಕುಡಿದು ಬದುಕಿದ್ದೆವು. ದೇವರ ಆಶೀರ್ವಾದದಿಂದ ಮತ್ತೆ ಆ ಕಷ್ಟದಿಂದ ಎದ್ದುಬಂದೆವು.’

ವೈರಲ್ ಆಗುತ್ತಿದೆ ಕಿಚ್ಚ ಸುದೀಪ್ ಡಿಫರೆಂಟ್ ಹೇರ್‌ ಸ್ಟೈಲ್!

Afghanistan crisis to New Drone policy top 10 news of August 26 ckm

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊಸ ಕೇಶ ವಿನ್ಯಾಸ ಮಾಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿವೆ. ಇದ್ಯಾವ ಚಿತ್ರಕ್ಕೆಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

ನಿದ್ರೆಯಲ್ಲಿದ್ದರೂ ತಾಲಿಬಾನ್‌ ಬಾಂಬ್‌ನಿಂದ ರಕ್ಷಣೆಗೆ ಬಂಕರ್‌ಗೆ ಓಡಬೇಕು!

Afghanistan crisis to New Drone policy top 10 news of August 26 ckm

‘ನಾನು 2 ವರ್ಷ ಕಾಲ ಆಷ್ಘಾನಿಸ್ತಾನದ ಬಾಗ್ರಾಂ, ಡಿ-ಶಿಪ್‌ ಹಾಗೂ ಶಾಂಕ್‌ ಹೆಸರಿನ ನ್ಯಾಟೋ ಕ್ಯಾಂಪ್‌ಗಳಲ್ಲಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದೆ. ನಮಗೆ ಹೊರಗೆ ಹೋಗಬೇಕಾದರೆ ಮಿಲಿಟರಿ ವಾಹನದಲ್ಲೇ ಅವಕಾಶ. ಸೇನಾ ಕ್ಯಾಂಪ್‌ ವಠಾರದಲ್ಲೇ ರಾತ್ರಿ ವಾಸ್ತವ್ಯ. ಆದರೆ ಹೆಚ್ಚಿನ ದಿನಗಳಲ್ಲಿ ರಾತ್ರಿ ತಾಲಿಬಾನಿಗಳು ಬಾಂಬ್‌ ದಾಳಿ ನಡೆಸುತ್ತಿದ್ದರು.

ಸ್ವೆಟರ್ ಸ್ಕ್ಯಾಮ್ : ಸತ್ಯ ರಿವೀಲ್ ಮಾಡಿದ ಬಿಜೆಪಿ ಶಾಸಕ

Afghanistan crisis to New Drone policy top 10 news of August 26 ckm

ಸ್ಯಾಂಡಲ್‌ವುಡ್ ಹಾಸ್ಯ ನಟರೋರ್ವರ ವಿರುದ್ಧ ಸ್ವೆಟರ್‌ ಸ್ಕ್ಯಾಮ್ ಗಂಭೀರ ಆರೋಪ ಎದುರಾಗಿದೆ. ಬಿಬಿಎಂಪಿ ಶಾಲೆಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios