ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗಿದೆ. ಗಡಿಯಿಂದಾಚೆಗಿರುವ ಭಯೋತ್ಪಾದನೆಯನ್ನು ಪತ್ತೆ ಹಚ್ಚಿ, ಉಗ್ರ ನಿಗ್ರಹಕ್ಕಾಗಿ ಹೋರಾಡಬೇಕಿದೆ.  ಮಾನ್ಯ ಅಜೀಜ್ ಅವರೇ, ಆ ಹಣವನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬಳಸಿ ಎಂದು ಘನಿ ಹೇಳಿದರು.

ಅಮೃತಸರ (ಡಿ.04): ಹಾರ್ಟ್ ಆಪ್ ಏಷ್ಯಾ ಸಮ್ಮೇಳನದಲ್ಲಿ ಮಾತನಾಡಿದ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ 500 ಮಿಲಿಯನ್ ಡಾಲರ್ ನೀಡುತ್ತೇವೆ ಎಂದು ಪಾಕಿಸ್ತಾನ ಭರವಸೆ ನೀಡಿತ್ತು. ಉಗ್ರರಿಗೆ ಆಶ್ರಯ ನೀಡುವ ಪಾಕ್, ಆ ಹಣವನ್ನು ಭಯೋತ್ಪಾದನೆಯ ವಿರುದ್ಧ ಹೋರಾಡುವುದಕ್ಕಾಗಿ ಬಳಸಲಿ ಎಂದು ಪಾಕ್ ವಿರುದ್ಧ ಗುಡುಗಿದರು. 

Add Asianetnews Kannada as a Preferred SourcegooglePreferred

ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾಗಿದೆ. ಗಡಿಯಿಂದಾಚೆಗಿರುವ ಭಯೋತ್ಪಾದನೆಯನ್ನು ಪತ್ತೆ ಹಚ್ಚಿ, ಉಗ್ರ ನಿಗ್ರಹಕ್ಕಾಗಿ ಹೋರಾಡಬೇಕಿದೆ. ಮಾನ್ಯ ಅಜೀಜ್ ಅವರೇ, ಆ ಹಣವನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬಳಸಿ ಎಂದು ಘನಿ ಹೇಳಿದರು.

 ಸಮ್ಮೇಳನದಲ್ಲಿ ಪಾಕಿಸ್ತಾನದ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಕೂಡಾ ಭಾಗವಹಿಸಿದ್ದು, ಅವರ ಮುಂದೆಯೇ ಘನಿ, ಪಾಕ್‍’ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿತ್ತು. ಇದು ಸಹಿಸಲಸಾಧ್ಯ. ಕೆಲವರು ಉಗ್ರರಿಗೆ ಅಭಯ ನೀಡುತ್ತಾರೆ. ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ನನಗೆ ಸ್ಪಷ್ಟನೆ ಬೇಕು ಎಂದು ಘನಿ ಗುಡುಗಿದರು.