ಏರೋ ಇಂಡಿಯಾ 2023ಕ್ಕೆ ಚಾಲನೆ; ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದ ಶಕ್ತಿ ಹೆಚ್ಚಳ: ಪ್ರಧಾನಿ ಮೋದಿ

*ಏರೋ ಇಂಡಿಯಾ 2023 ವೈಮಾನಿಕ ಶೋ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
*5 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮ
* 98 ದೇಶಗಳು ಭಾಗಿ, 809 ವೈಮಾನಿಕ ಪ್ರದರ್ಶನ

 

Aero India 2023 PM Narendra Modi inauguarated Asias Biggest Air Show in Bengaluru

ಬೆಂಗಳೂರು (ಫೆ.13):  ಏರೋ ಇಂಡಿಯಾ 2023 ವೈಮಾನಿಕ ಶೋ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಯಲಹಂಕ ವಾಯುನನೆಲೆಯಲ್ಲಿ ಚಾಲನೆ ನೀಡಿದರು. 14ನೇ ಆವೃತ್ತಿಯ ಏರ್‌ ಶೋ ಉದ್ಘಾಟಿಸಿ ಮಾತನಾಡಿದ ಮೋದಿ 'ಹೊಸ ಎತ್ತರ, ಹೊಸ ಭಾರತದ ಪ್ರತೀಕ. ಭಾರತ ಇಂದು ಹೊಸ ಎತ್ತರಕ್ಕೆ ಏರುತ್ತಿದೆ. ಏರ್ ಇಂಡಿಯಾ ಭಾರತದ ಸಾಮರ್ಥ್ಯದ ಹೆಚ್ಚಳಕ್ಕೆ ಉದಾಹರಣೆಯಾಗಿದೆ. ಈ ಕಾರ್ಯಕ್ರಮದಲ್ಲಿ ವಿದೇಶಿ ಪ್ರತಿನಿಧಿಗಳ ಭಾಗಿ ಭಾರತದ ಸಾಮರ್ಥ್ಯದಲ್ಲಿ ಹೆಚ್ಚಳವಾಗಿರೋದನ್ನು ತೋರಿಸುತ್ತದೆ' ಎಂದರು. ಆತ್ಮನಿರ್ಭರ ಭಾರತದ ಶಕ್ತಿ ಹೀಗೆ ಬೆಳೆಯಲಿವೆ. ಭಾರತದ ಜನಪ್ರಿಯ ಸಂಸ್ಥೆಗಳು, ಸ್ಟಾರ್ಟ್ ಅಪ್ ಗಳು ಹಾಗೂ ವಿದೇಶಿ ಸಂಸ್ಥೆಗಳು ಭಾಗವಹಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಉದ್ಘಾಟನೆಗೂ ಮುನ್ನ ಮಿರಾಜ್ -2000, ಅರ್ಜುನ್, ಮಿರಾಗ್, ತೇಜಸ್, ನೇತ್ರಾ ಸೇರಿದಂತೆ ವಿವಿಧ ವಿಮಾನಗಳ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ವೀಕ್ಷಿಸಿದರು. ಏರೋ ಇಂಡಿಯಾ ಶೋ ಐದು ದಿನಗಳ ಕಾಲ ನಡೆಯಲಿದ್ದು, ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿದೆ.  ಈ ವೈಮಾನಿಕ ಶೋ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿರೋದು ಇದು ಎರಡನೇ ಬಾರಿಯಾಗಿದೆ. 2015ರಲ್ಲೂ ಅವರು ಏರ್‌ ಶೋ ಉದ್ಘಾಟಿಸಿದ್ದರು.

'ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಮುಂದಿದೆ. ಈ ಪ್ರದರ್ಶನದಿಂದ ಏರೋ ಸ್ಪೇಸ್ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳಾಗಲಿವೆ. ಇದರಿಂದ ಕರ್ನಾಟಕಕ್ಕೆ ಇನ್ನಷ್ಟು ಹೂಡಿಕೆ ಸಿಗಲಿದೆ. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ' ಎಂದು ಮೋದಿ ಹೇಳಿದರು. 

'ಭಾರತದ ರಕ್ಷಣಾ ಕ್ಷೇತದಲ್ಲಿ ಮುಂದಿರುವ ರಾಷ್ಟ್ರಗಳೊಂದಿಗೆ ಉತ್ತಮ ಪಾಲುದಾರ ದೇಶವಾಗಿ ಕೂಡ ಮುಂದುವರಿಯುತ್ತಿದೆ. ತೇಜಸ್ ಪೈಟರ್ ಪೈಲಟ್,  ಐಎಎಸ್ ವಿಕ್ರಾಂತ್  ಮೇಕ್ ಇನ್ ಇಂಡಿಯಾದ ದ್ಯೋತಕಗಳಾಗಿವೆ. ತುಮಕೂರಿನ ಎಚ್ ಎಎಲ್ ಹೆಲಿಕ್ಯಾಪ್ಟರ್ ನಿರ್ಮಾಣ ಕಾರ್ಖಾನೆ ಆತ್ಮನಿರ್ಭರ ಭಾರತದ ಪ್ರತೀಕವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪೈಟರ್ ಪೈಲಟ್ ಮಾದರಿಯಲ್ಲಿಆತ್ಮನಿರ್ಭರ ಭಾರತ ಕಾರ್ಯನಿರ್ವಹಿಸುತ್ತಿದೆ ಎಂದರು. ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತೆ ಖಾಸಗಿ ಸಂಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದರು.

Aero India-2023ರಲ್ಲಿ 100ಕ್ಕೂ ಅಧಿಕ ದೇಶಗಳು ಭಾಗಿ: ಉದ್ಯೋಗಕ್ಕೆ ವಿಪುಲ ಅವಕಾಶ- ರಾಜನಾಥ್‌ ಸಿಂಗ್

ಕಾರ್ಯಕ್ರಮದಲ್ಲಿ ಮಾತನಾಡಿದ  ರಕ್ಷಣಾ ಸಚಿವ ರಾಜನಾಥ್ ಸಿಂಗ್‌ 'ಕರ್ನಾಟಕ ಶ್ರೀಗಂಧದ ಬೀಡಾಗಿದೆ. ಹೇಗೆ ಶ್ರೀಗಂಧದ ಪರಿಮಳ ಬಹುದೂರದ ತನಕ ಪಸರಿಸುತ್ತದೋ ಅದೇ ರೀತಿ ಈ ನಾಡಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ ಜನಪ್ರಿಯತೆ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪಸರಿಸಲಿದೆ' ಎಂದು ಹೇಳಿದರು. ಏರೋ ಇಂಡಿಯಾ ಭಾರತದ ವೈಮಾನಿಕ ಶಕ್ತಿಯ ಪ್ರದರ್ಶನವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಅಭಿವೃದ್ಧಿಗಳು ನಡೆದಿದ್ದು, ಈ ಕ್ಷೇತ್ರ ಸಶಕ್ತಗೊಂಡಿವೆ. ಕರ್ನಾಟಕ ಧರ್ಮ, ಶಕ್ತಿ, ಪರಕ್ರಮದ ಭೂಮಿಯಾಗಿದೆ. ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ ಎಂದು ರಾಜನಾಥ್ ಸಿಂಗ್‌ ಹೇಳಿದರು.

ಕರ್ನಾಟಕದಲ್ಲಿ ಸತತ 14ನೇ ಬಾರಿ ಏರ್ ಶೋ ಏರ್ಪಡಿಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರು ದೇಶದ ವೈಮಾನಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು. 

ವ್ಯಾಪ್ತಿ ವಿಸ್ತರಣೆ
ಆವೃತ್ತಿಯಿಂದ ಆವೃತ್ತಿಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವ ಏರೋ ಇಂಡಿಯಾ ಈ ಬಾರಿಯೂ ತನ್ನ ಪ್ರದರ್ಶನ ವ್ಯಾಪ್ತಿಯನ್ನು ಶೇ.35ರಷ್ಟು ವಿಸ್ತಾರಗೊಳಿಸಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಬರುವ ನಿರೀಕ್ಷೆಯಿದ್ದು, ಪ್ರಸ್ತುತ ಖಚಿತಪಟ್ಟಿರುವ ಒಡಂಬಡಿಕೆಗಳ ಮೂಲಕವೇ 75 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. 2021ರಲ್ಲಿ ನಡೆದ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದಲ್ಲಿ 600 ಮಂದಿ ಪ್ರದರ್ಶಕರು ಭಾಗವಹಿಸಿದ್ದರು. ಈ ಸಂಖ್ಯೆ ಪ್ರಸಕ್ತ ವೈಮಾನಿಕ ಪ್ರದರ್ಶನದಲ್ಲಿ 809ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ 55 ದೇಶಗಳು ಮಾತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಪ್ರಸ್ತುತ 98 ದೇಶಗಳು ತಮ್ಮ ಭಾಗವಹಿಸುವಿಕೆ ಖಚಿತಪಡಿಸಿವೆ. ಒಟ್ಟು 251 ಒಡಂಬಡಿಕೆ ಸಿದ್ಧಗೊಂಡಿದ್ದು, ಕಳೆದ ವರ್ಷ 23 ಸಾವಿರ ಚದರ ಮೀಟರ್‌ ವ್ಯಾಪ್ತಿಗೆ ಸೀಮಿತವಾಗಿದ್ದ ಪ್ರದರ್ಶನ ವ್ಯವಸ್ಥೆಯು ಈ ಬಾರಿ 35,000 ಚದರ ಮೀಟರ್‌ ವ್ಯಾಪ್ತಿಗೆ ವಿಸ್ತರಿಸಿದೆ. 

ಏರ್‌ಶೋದಲ್ಲಿ ಅಮೆರಿಕದ ದೊಡ್ಡ ನಿಯೋಗ ಭಾಗಿ

67 ವಿಮಾನಗಳ ಪ್ರದರ್ಶನ
ಕಳೆದ ಬಾರಿ 64 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದ್ದವು. ಈ ಬಾರಿ ಸಾರಂಗ್‌, ಸೂರ್ಯಕಿರಣ್‌ ವೈಮಾನಿಕ ಪ್ರದರ್ಶನ ತಂಡ, ಸುಖೋಯ್‌, ರಫೇಲ್‌, ತೇಜಸ್‌ ಸೇರಿದಂತೆ ಒಟ್ಟು 67 ವಿಮಾನಗಳು ಪ್ರದರ್ಶನ ನೀಡಲಿವೆ. ಉಳಿದಂತೆ ಸ್ಟ್ಯಾಟಿಕ್‌ ಡಿಸ್‌ಪ್ಲೇಯಲ್ಲಿ 36 ವಿಮಾನಗಳು ಪ್ರದರ್ಶನಗೊಳ್ಳಲಿವೆ.

ಏರೋ ಇಂಡಿಯಾ ವಿಶೇಷ
ಪ್ರದರ್ಶಕರ ಸಂಖ್ಯೆ
-809
ಭಾಗವಹಿಸುವ ಒಟ್ಟು ದೇಶಗಳು- 98
ವೈಮಾನಿಕ ಪ್ರದರ್ಶನ ನೀಡಲಿರುವ ವಿಮಾನ: 67
 

 

Latest Videos
Follow Us:
Download App:
  • android
  • ios