ಗೃಹ ಸಚಿವ ರಾಜನಾಥ್ ಸಿಂಗ್ ಚಿತ್ರ ಬಿಡುಗಡೆಗೆ ಬೆಂಬಲ ನೀಡಿದ್ದಾರೆ. ಫಿಲ್ಮ್ ಅಂಡ್ ಟೆಲಿವಿಷನ್ ಪ್ರೊಡ್ಯೂಸರ್ ಆಫ್ ಇಂಡಿಯಾದ ಅಧ್ಯಕ್ಷ ಮುಕೇಶ್ ಭಟ್ ಇಂದು ರಾಜನಾಥ್ ಸಿಂಗ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೀಪಾವಳಿಗೂ 2 ದಿನ ಮುಂಚಿತವಾಗಿ ಅ.28 ರಂದು ಚಿತ್ರ ಬಿಡುಗಡೆಯಾಗಲಿದೆ.

ನವದೆಹಲಿ (ಅ.20): ನಿರ್ದೇಶಕ ಕರಣ್ ಜೋಹರ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ 'ಯೇ ದಿಲ್ ಹೇ ಮುಷ್ಕಿಲ್' ಬಿಡುಗಡೆಗೆ ಉಂಟಾಗಿದ್ದ ಸಂಕಷ್ಟ ನಿವಾರಣೆಯಾಗಿದೆ. ಈ ಬಾರಿಯ ದೀಪಾವಳಿ ಕರಣ್ ಜೋಹರ್ ಪಾಲಿಗೆ ‘ಗ್ರೇಟ್ ದಿವಾಲಿ’ಯಾಗಲಿದೆ.

ಗೃಹ ಸಚಿವ ರಾಜನಾಥ್ ಸಿಂಗ್ ಚಿತ್ರ ಬಿಡುಗಡೆಗೆ ಬೆಂಬಲ ನೀಡಿದ್ದಾರೆ. ಫಿಲ್ಮ್ ಅಂಡ್ ಟೆಲಿವಿಷನ್ ಪ್ರೊಡ್ಯೂಸರ್ ಆಫ್ ಇಂಡಿಯಾದ ಅಧ್ಯಕ್ಷ ಮುಕೇಶ್ ಭಟ್ ಇಂದು ರಾಜನಾಥ್ ಸಿಂಗ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೀಪಾವಳಿಗೂ 2 ದಿನ ಮುಂಚಿತವಾಗಿ ಅ.28 ರಂದು ಚಿತ್ರ ಬಿಡುಗಡೆಯಾಗಲಿದೆ.

ರಾಜನಾಥ್ ಸಿಂಗ್ ಚಿತ್ರ ಬಿಡುಗಡೆಗೆ ಭರವಸೆ ನೀಡಿದ್ದು ಪ್ರತಿ ರಾಜ್ಯದಲ್ಲೂ ಕಾನೂನು ಸುವ್ಯವಸ್ಥೆ ಕಾಪಾಡಲು ಕಾನೂನು ಸಚಿವರ ಜೊತೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಮುಕೇಶ್ ಭಟ್ ಹೇಳಿದ್ದಾರೆ.