ಅಗರಬತ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ: ಗಣೇಶ್’ಗೆ 75 ಲಕ್ಷ ಪರಿಹಾರ

First Published 2, Apr 2018, 4:15 PM IST
Advertise Company Compensate to Golden Star Ganesh
Highlights

ಅಗರಬತ್ತಿ  ಪ್ರಚಾರಕ್ಕೆ  ಅನುಮತಿ  ಇಲ್ಲದೆ  ಗಣೇಶನ  ಫೋಟೋ ಬಳಸಿದ್ದಕ್ಕೆ  ಗೋಲ್ಡನ್ ಸ್ಟಾರ್ ಗಣೇಶ್’ಗೆ  75 ಲಕ್ಷ ಪರಿಹಾರ ನೀಡುವಂತೆ ಜಾಹಿರಾತು ಕಂಪನಿಗೆ  ಕೋರ್ಟ್ ಆದೇಶ ನೀಡಿದೆ. 

ಬೆಂಗಳೂರು (ಏ. 02):  ಅಗರಬತ್ತಿ  ಪ್ರಚಾರಕ್ಕೆ  ಅನುಮತಿ  ಇಲ್ಲದೆ  ಗಣೇಶನ  ಫೋಟೋ ಬಳಸಿದ್ದಕ್ಕೆ  ಗೋಲ್ಡನ್ ಸ್ಟಾರ್ ಗಣೇಶ್’ಗೆ  75 ಲಕ್ಷ ಪರಿಹಾರ ನೀಡುವಂತೆ ಜಾಹಿರಾತು ಕಂಪನಿಗೆ  ಕೋರ್ಟ್ ಆದೇಶ ನೀಡಿದೆ. 

2008 ರಲ್ಲಿ ಮೋಕ್ಷ ಅಗರಬತ್ತಿ ಕಂಪನಿ ವಿರುದ್ಧ ಗಣೇಶ್  ಮಾನನಷ್ಟ ಮೊಕದ್ದಮೆ ಹೂಡಿದ್ದರು.  ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಕೋರ್ಟ್  ಅಂತಿಮ ತೀರ್ಪು ನೀಡಿದೆ.  ನಟ ಗಣೇಶ್’ಗೆ   75  ಲಕ್ಷ ಮಾನನಷ್ಟ ಪರಿಹಾರ ನೀಡಲು ನಿರ್ದೇಶನ ನೀಡಿದೆ. 

ಮೋಕ್ಷ ಅಗರಬತ್ತಿ ಕಂಪನಿಗೆ ಸೆಷನ್ಸ್ ಕೋರ್ಟ್ ನಿರ್ದೇಶನ ನೀಡಿದೆ.  ಚೆಲುವಿನ ಚಿತ್ತಾರ ಸಿನಿಮಾ ಪೋಸ್ಟರ್ ಫೋಟೋವನ್ನು  ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿತ್ತು. 

loader