ನವದೆಹಲಿ(ಡಿ.15): ಸಂಸತ್ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದ ಬರೀ ಗದ್ದಲ, ಕೋಲಾಹಲದಲ್ಲೇ ಮುಳುಗಿ ಹೋಗಿದೆ. ಇವತ್ತು ಕೂಡ ನೋಟ್ ಬ್ಯಾನ್ ಕುರಿತು ಮೋದಿ ಉತ್ತರ ನೀಡಲಿಲ್ಲ. ಹೀಗಾಗಿ, ವಿಪಕ್ಷಗಳು ಇವತ್ತೂ ಸಹ ಗದ್ದಲ-ಕೋಲಾಹಲ ಎಬ್ಬಿಸಿದ್ರಿಂದ ಕಲಾಪ ಮುಂದೂಡಲಾಯ್ತು. ಸ್ಪೀಕರ್ ಸುಮಿತ್ರ ಮಹಾಜನ್ ಕಲಾಪವನ್ನ ನಾಳೆಗೆ ಮುಂದೂಡಿಕೆ ಮಾಡುತ್ತಲೇ ಅಡ್ವಾಣಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲಿಗೆ ಸ್ಮೃತಿ ಇರಾನಿ ಬಳಿ ತಮ್ಮ ಕೋಪವನ್ನ ವ್ಯಕ್ತಪಡಿಸಿದ ಅಡ್ವಾಣಿ ಬಳಿಕ ರಾಜನಾಥ್ ಸಿಂಗ್ ಬಳಿ ಅಸಮಾಧಾನವನ್ನ ವಿವರಿಸಿದ್ದಾರೆ. ನಾನೇಕೆ ಇಂತಹ ಸದನದಲ್ಲಿ ಮುಂದುವರೆಯಲಿ, ರಾಜೀನಾಮೆ ನೀಡಬೇಕಾ? ಎಂದು ಪ್ರಶ್ನಿಸಿದ್ದಾರೆ. ಸ್ಪೀಕರ್ ಸಭೆ ಕರೆದು ನಾಳೆ ಕಲಾಪ ನಡೆಯುವಂತೆ ನೋಡಿಕೊಳ್ಳಬೇಕೆಂದು ಅಡ್ವಾಣಿ ಆಗ್ರಹಿಸಿದ್ದಾರೆ.