ನವದೆಹಲಿ(ಆ.17): ಗಾಂಧಿ-ನಮೆಹರೂ ಕುಟುಂಬಕ್ಕೆ ತನ್ನದೇ ಆದ ನಾಮ ಮೌಲ್ಯವಿದ್ದು, ಈ ಪರಿವಾರದ ವ್ಯಕ್ತಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಲೋಕಸಭೆಯ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚೌಧರಿ, ನೆಹರೂ-ಗಾಂಧಿ ಕುಟುಂಬದ ಹೆಸರಿಗೆ ಬ್ರ್ಯಾಂಡ್ ವ್ಯಾಲ್ಯೂ ಇದ್ದು, ಆ ಕುಟುಂಬದ ವ್ಯಕ್ತಿಯೇ ಅಧ್ಯಕ್ಷ ಸ್ಥಾನ ಅಲಂಕರಿಸಬೇಕು ಎಂದು ಹೇಳಿದ್ದಾರೆ.

ಜಾತ್ಯಾತೀತ, ಆಧುನಿಕ ಭಾರತದ ನಿರ್ಮಾಣ ಕಾಂಗ್ರೆಸ್’ನಿಂದ ಮಾತ್ರ ಸಾಧ್ಯ ಎಂದು ಹೇಳಿರವ ಚೌಧರಿ, ಬಿಜೆಪಿಯ ಕೋಮುವಾದಿ ಅಜೆಂಡಾವನ್ನು ಸೋಲಿಸುವುದು ಕಾಂಗ್ರೆಸ್’ನಿಂದ ಮಾತ್ರ ಸಾಧ್ಯ ಎಂದೂ  ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಪ್ರಾದೇಶಿಕ ಪಕ್ಷಗಳು ಶೀಘ್ರದಲ್ಲೇ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ ಎಂದಿರುವ ಅಧೀರ್ ಚೌಧರಿ, ಭಾರತದಲ್ಲಿ ಎರಡು ಭಿನ್ನ ಸಿದ್ಧಾಂತವುಳ್ಳ ರಾಷ್ಟ್ರೀಯ ಪಕ್ಷಗಳ ನಡುವೆ ಪೈಪೋಟಿ ನಡೆಯಲಿದೆ ಎಂದು ಹೇಳಿದ್ದಾರೆ.