Asianet Suvarna News Asianet Suvarna News

ಇನ್ಷೂರೆನ್ಸ್ ಪಾಲಿಸಿಗೆ ಆಧಾರ್, ಪ್ಯಾನ್ ಕಡ್ಡಾಯ

ಪಾಲಿಸಿಗಳಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ? ಪಾಲಿಸಿ ಮೆಚ್ಯೂರಿಟಿಯಾದಾಗ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಣ ಪಡೆಯಬೇಕಾದರೆ ಆಧಾರ್ ಮತ್ತು ಪ್ಯಾನ್ ನಂಬರ್ ಕೊಡಲೇಬೇಕು. ಹೊಸದಾಗಿ ಇನ್ಷೂರೆನ್ಸ್ ಪಾಲಿಸಿ ಮಾಡುವವರು ಕಡ್ಡಾಯವಾಗಿ ಇವುಗಳನ್ನು ಕೊಡಲೇಬೇಕು.

adhaar and pan mandatory for insurance policies

ಮುಂಬೈ(ನ. 09): ದೇಶದ ಎಲ್ಲಾ ಇನ್ಷೂರೆನ್ಸ್ ಪಾಲಿಸಿಗಳಿಗೆ ಆಧಾರ್ ನಂಬರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಬೇಕೆಂದು ಸರಕಾರ ನಿರ್ದೇಶನ ಹೊರಡಿಸಿದೆ. ಆಧಾರ್ ಕಡ್ಡಾಯವಾಗಿರುವ ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಹೀಗೆ ಹಲವು ಸೌಲಭ್ಯ ಮತ್ತು ಸೇವೆಗಳ ಪಟ್ಟಿಗೆ ಈ ಇನ್ಷೂರೆನ್ಸ್ ಕೂಡ ಸೇರ್ಪಡೆಯಾಗಿದೆ. ಹೊಸದಾಗಿ ಮಾಡುವ ವಿಮೆಗಳಷ್ಟೇ ಅಲ್ಲ, ಚಾಲ್ತಿಯಲ್ಲಿರುವ ಪಾಲಿಸಿಗಳೆಲ್ಲವನ್ನೂ ಅಪ್'ಡೇಟ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ಷೂರೆನ್ಸ್ ಕಂಪನಿಗಳು ಮತ್ತು ಗ್ರಾಹಕರಿಗೆ ಈಗ ಹೊಸ ಹೊರೆ ಸಿಕ್ಕಿದೆ.

ಒಂದು ವೇಳೆ, ಪಾಲಿಸಿಗಳಿಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ? ಪಾಲಿಸಿ ಮೆಚ್ಯೂರಿಟಿಯಾದಾಗ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಣ ಪಡೆಯಬೇಕಾದರೆ ಆಧಾರ್ ಮತ್ತು ಪ್ಯಾನ್ ನಂಬರ್ ಕೊಡಲೇಬೇಕು. ಹೊಸದಾಗಿ ಇನ್ಷೂರೆನ್ಸ್ ಪಾಲಿಸಿ ಮಾಡುವವರು ಕಡ್ಡಾಯವಾಗಿ ಇವುಗಳನ್ನು ಕೊಡಲೇಬೇಕು.

ಸರಕಾರಿ ಸ್ವಾಮ್ಯದ ಎಲ್'ಐಸಿ ಸಂಸ್ಥೆಯಷ್ಟೇ ಅಲ್ಲ ಖಾಸಗಿ ಇನ್ಷೂರೆನ್ಸ್ ಕಂಪನಿಗಳ ಪಾಲಿಸಿಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಈಗ ವಿಮೆ ಸಂಸ್ಥೆಗಳು ತನ್ನೆಲ್ಲಾ ಗ್ರಾಹಕರಿಂದ ಮತ್ತೊಮ್ಮೆ ಕೆವೈಸಿ ಫಾರ್ಮ್ ತುಂಬಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಿವೆ. ನೀವು ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ್ದರೆ ಆಧಾರ್ ಮತ್ತು ಪ್ಯಾನ್ ನಂಬರ್ಸ್ ಸಬ್ಮಿಟ್ ಮಾಡಿ. ಮೊಬೈಲ್ ಮೆಸೇಜ್ ಅಥವಾ ಆನ್'ಲೈನ್ ಮುಖಾಂತರವೂ ಇವುಗಳನ್ನು ಲಿಂಕ್ ಮಾಡುವ ಅವಕಾಶ ಗ್ರಾಹಕರಿಗೆ ಇರುತ್ತದೆ.

Follow Us:
Download App:
  • android
  • ios