ನಟಿ ತಾನ್ಯಾ ಹೋಪ್ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ನಟ ದರ್ಶನ್ ಅವರ ಜತೆ ಬಸಣ್ಣಿ ಹಾಡಿಗೆ ಹೆಜ್ಜೆ ಹಾಕಿದ ಹುಡುಗಿ. ಅಭಿಷೇಕ್ ಅಂಬರೀಶ್ ಜತೆ ‘ಅಮರ್’ಗೆ ನಾಯಕಿ ಆದ ಹುಡುಗಿ.

ಪೂನಂ ಹಿಂದಿಕ್ಕಿದ ಶರ್ಲಿನ್, ವಿಶ್ವಕಪ್ ಗೆಲುವಿಗೆ ಎದೆಯಾಳದ ಹಾರೈಕೆ!

ಈಕೆಯ ಮುಂದಿನ ಸಿನಿಮಾ ಯಾವುದು ಎಂದುಕೊಳ್ಳುತ್ತಿರುವಾಗಲೇ ತೆಲುಗಿನ ರವಿತೇಜ ನಟನೆಯ ‘ಡಿಸ್ಕೋ ರಾಜ’ ಚಿತ್ರದಲ್ಲಿ ಸೈಂಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ತಾನ್ಯಾ ಹೋಪ್ ಅವರಿಗೆ ಇದು ನಾಲ್ಕನೇ ತೆಲುಗು ಸಿನಿಮಾ. ಇದೇ ಚಿತ್ರದಲ್ಲಿ ಮತ್ತೋರ್ವ ಕನ್ನಡತಿ ಕೂಡ ನಟಿಸುತ್ತಿದ್ದಾರೆ. ಅವರೇ ನಭಾನಟೇಶ್.

ಅಭಿಮಾನಿಯ ‘ಕಸ್ತೂರಿ ನಿವಾಸ’ದ ತುಂಬೆಲ್ಲಾ ಅಣ್ಣಾವ್ರ ಫೋಟೋ; ಪುನೀತ್ ಫುಲ್ ಖುಷ್!

ಒಟ್ಟು ಮೂವರು ನಾಯಕಿಯರು ಚಿತ್ರದಲ್ಲಿದ್ದು, ಇಬ್ಬರು ಕನ್ನಡದವರೇ ಎಂಬುದು ವಿಶೇಷ. ಆನಂದ್ ವಿ ಐ ‘ಡಿಸ್ಕೋ ರಾಜ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಅಮರ್’, ‘ಯಜಮಾನ’ ಚಿತ್ರಗಳ ನಂತರ ಚಿರಂಜೀವಿ ಸರ್ಜಾ ಜತೆಗೆ ‘ಖಾಕಿ’ ಚಿತ್ರಕ್ಕೂ ನಾಯಕಿ ಆಗಿದ್ದಾರೆ. ಹಿಂದಿಯಲ್ಲಿ ನಾಗಶೇಖರ್ ನಿರ್ದೇಶನದ ಚಿತ್ರಕ್ಕೂ ಇವರೇ ನಾಯಕಿ ಎನ್ನುವ ಮಾತಿದೆ.