ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳನ್ನೇ ದೇವರೆಂದು ಕರೆದ ದೇವತಾ ಮನುಷ್ಯ. ಅಭಿಮಾನಿಗಳಿಗೂ ಅಷ್ಟೇ. ಅವರನ್ನು ದೇವರೆಂದೇ ಆರಾಧಿಸುತ್ತಾರೆ. 

ಮೈಸೂರಿನಲ್ಲಿ ಅವರ ಅಭಿಮಾನಿಯೊಬ್ಬರು ಡಾ. ರಾಜ್ ಖ್ಯಾತ ಸಿನಿಮಾ ಕಸ್ತೂರಿ ನಿವಾಸ ದ ಹೆಸರನ್ನು ತಮ್ಮ ಮನೆಗೆ ಇಟ್ಟಿದ್ದಾರೆ. ಅಷ್ಟೇ ಅಲ್ಲ. ಅವರ ಮನೆಯ ದೇವರ ಕೋಣೆ, ಮನೆ ಗೋಡೆ ತುಂಬೆಲ್ಲಾ ಅಣ್ಣಾವ್ರ ಫೋಟೋಗಳನ್ನು ಹಾಕಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೇ ಸದಾ ಚಿರಋಣಿ 🙏

A post shared by Puneeth Rajkumar (@puneethrajkumar.official) on Jul 8, 2019 at 10:41pm PDT

 ಪುನೀತ್ ‘ಯುವರತ್ನ’ ಸಿನಿಮಾ ಶೂಟಿಂಗ್ ಗೆಂದು ಮೈಸೂರಿಗೆ ತೆರಳಿದ್ದರು. ಆಗ ಇವರ ಮನೆಗೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಮೇಲಿನ ಅಭಿಮಾನ ಕಂಡು ಖುಷಿಯಾಗಿದ್ದಾರೆ. 

ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಸದಾ ಋಣಿ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.