ಖ್ಯಾತ ನಟಿ ಶಿಲ್ಪಾ ಶೆಟ್ಟಿ, ಆಸ್ಟ್ರೇಲಿಯಾದ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ವಿರುದ್ದ ಜನಾಂಗೀಯ ನಿಂದನೆಯ ಆರೋಪ ಮಾಡಿ ದ್ದಾರೆ. ಇತ್ತೀಚೆಗೆ ನಾನು ಸಿಡ್ನಿಯಿಂದ ಮೆಲ್ಬರ್ನ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಮೆಲ್ಬರ್ನ್ (ಆಸ್ಟ್ರೇಲಿಯಾ): ಖ್ಯಾತ ನಟಿ ಶಿಲ್ಪಾ ಶೆಟ್ಟಿ, ಆಸ್ಟ್ರೇಲಿಯಾದ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ವಿರುದ್ದ ಜನಾಂಗೀಯ ನಿಂದನೆಯ ಆರೋಪ ಮಾಡಿ ದ್ದಾರೆ. ಇತ್ತೀಚೆಗೆ ನಾನು ಸಿಡ್ನಿಯಿಂದ ಮೆಲ್ಬರ್ನ್‌ಗೆ ಪ್ರಯಾಣಿಸುತ್ತಿದ್ದೆ. 

Add Asianetnews Kannada as a Preferred SourcegooglePreferred

ಈ ವೇಳೆ ನನ್ನ ಬಳಿ 2 ಚಿಕ್ಕ ಬ್ಯಾಗ್ ಇತ್ತು. ಆದರೆ ಸಿಡ್ನಿ ನಿಲ್ದಾಣದ ಮಹಿಳಾ ಅಧಿಕಾರಿಯೊಬ್ಬರು, ನನ್ನ ಜೊತೆ ಸೂಕ್ತವಲ್ಲದ ರೀತಿಯಲ್ಲಿ ನಡೆದುಕೊಂಡರು. 

ನನ್ನ ಬ್ಯಾಗ್ ಅರ್ಧ ಖಾಲಿ, ಇದ್ದರೂ, ಅದನ್ನು ದೊಡ್ಡ ಬ್ಯಾಗ್ ಪರಿಶೀಲನೆ ಮಾಡುವ ಕೌಂಟರ್‌ಗೆ ಕಳುಹಿಸಿದರು. ಆಕೆಗೆ ಏನೆಲ್ಲಾ ಮನವರಿಕೆ ಮಾಡುವ ಯತ್ನ ಮಾಡಿದರೂ ಆಕೆ ಕೇಳಲಿಲ್ಲ. ನಮ್ಮ (ಕಂದುಬಣ್ಣದವರು) ಜೊತೆ ಹೇಗೆ ಬೇಕಾದರೂ ನಡೆದುಕೊಳ್ಳಬಹುದು ಎಂಬಂತಿತ್ತು ಆ ಮಹಿಳಾ ಅಧಿಕಾರಿ ವರ್ತನೆ ಎಂದು ಶಿಲ್ಪಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ಜೊತೆಗೆ ಘಟನೆ ಕುರಿತು ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಜನಾಂಗೀಯ ನಿಂದನೆಯನ್ನು ಸಹಿಸಲಾಗುವುದಿಲ್ಲ,’ ಎಂದು ಹೇಳಿದ್ದಾರೆ. 

View post on Instagram