ನಟಿ ಸಂಜನಾ ಗಲ್ರಾನಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಯಾಕೆ?ಏನು? ಇಲ್ಲಿದೆ ವಿವರ

ಬೆಂಗಳೂರು, [ನ.13]: ಗಂಡ-ಹೆಂಡತಿ ಚಿತ್ರದ ಜಗಳ ಒಂದು ಹಂತಕ್ಕೆ ಬಂದು ನಿಂತಿದೆ.

ಗಂಡ ಹೆಂಡತಿ ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡ್ರು, ಒತ್ತಾಯ ಮಾಡಿ ಕಿಸ್ಸಿಂಗ್​ ಸೀನ್​ ಮಾಡಿಸಿದ್ದರು ಎಂದು ಮಿಟೂ ಅಭಿಯಾನದಲ್ಲಿ ನಿರ್ದೇಶಕ ರವಿ ಶ್ರೀವತ್ಸಾ ಮೇಲೆ ಸಂಜನಾ ಗಲ್ರಾನಿ ಆರೋಪ ಮಾಡಿದ್ದರು.

ಸಂಜನಾ ಕ್ಷಮೆ ಕೇಳಲು ಸೂಚಿಸಿದ ನಿರ್ದೇಶಕರ ಸಂಘ

ಈ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿಯನ್ನು ಎಬ್ಬಿಸಿತ್ತು. ಆದ್ರೆ ಇದೀಗ ಈ ಆರೋಪ ಕೊಂಚ ಮಟ್ಟಿಗೆ ತಣ್ಣಗಾಗಿದೆ. ಯಾಕಂದ್ರೆ ಸ್ವತಃ ಸಂಜನಾ ಅವರೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಮಧ್ಯಸ್ತಿಕೆಯಲ್ಲಿ ಇಂದು [ಮಂಗಳವಾರ] ಕನ್ನಡ ನಿರ್ದೇಶಕ ಸಂಘಕ್ಕೆ ಸಂಜನಾ ಕ್ಷಮೆ ಕೋರಿದ್ದಾರೆ. ನಾನು ಯಾರ ಮನಸ್ಸು ನೋಯಿಸುವ ಸಲುವಾಗಿ ಅರೋಪ ಮಾಡಿಲ್ಲ, ಸಿನಿಮಾದ ಚಿತ್ರೀಕರಣದ ವೇಳೆ ತಮಗಾದ ನೋವನ್ನ ಹೇಳಿಕೊಂಡಿದ್ದೇನೆ ಅಷ್ಟೇ ಎಂದಿದ್ದಾರೆ.

12 ವರ್ಷಗಳ ನಂತರ ಶುರುವಾಯ್ತು ಗಂಡ-ಹೆಂಡತಿ ಜಗಳ

ನವೆಂಬರ್​ 8ರ ಒಳಗೆ ಬಂದು ನಿರ್ದೇಶಕರ ಸಂಘದಲ್ಲಿ, ಚಿತ್ರದ ನಿರ್ದೇಶಕ ರವಿ ಶ್ರೀ ವತ್ಸಾ ಅವ್ರ ಬಳಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಚಲನಚಿತ್ರ ನಿರ್ದೇಶಕರ ಸಂಘ ಗಡುವು ನೀಡಿತ್ತು.

ಅದರಂತೆ ಇಂದು ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್​ ಸ್ಟಾರ್​ ಅಂಬರೀಶ್​ ಸಮ್ಮುಖದಲ್ಲಿ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಟಿ ಸಂಜನಾ ಗಲ್ರಾನಿ ಕ್ಷಮೆ ಕೋರಿದ್ದಾರೆ.