ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ನಟಿ ರಮ್ಯಾ ಇನ್ನೂ ಕೂಡ ಆಗಮಿಸಿಲ್ಲ. ಈ ಸಂಬಂಧ ಅಭಿಮಾನಿಗಳು ರಮ್ಯಾ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು : ನಟ ಅಂಬರೀಷ್‌ ಅವರ ನಿಧನದ ಸುದ್ದಿ ತಿಳಿದರೂ ಸ್ವತಃ ಮಂಡ್ಯ ಮಾಜಿ ಸಂಸದೆ ರಮ್ಯಾ ಅಂತಿಮ ದರ್ಶನಕ್ಕೆ ಬಾರದಿರುವುದು ಅಭಿಮಾನಿಗಳ ವಲಯದಲ್ಲಿ ಭಾರೀ ಆಕ್ರೋಶ ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಬರೀಷ್‌ ಅವರನ್ನು ‘ಅಂಬರೀಷ್‌ ಅಂಕಲ್‌’ ಎಂದೇ ಆಪ್ತತೆ, ಅಭಿಮಾನ ತೋರುತ್ತಿದ್ದ ರಮ್ಯಾ ದೆಹಲಿಯಲ್ಲೇ ಇದ್ದರೂ ಭಾನುವಾರ ಬೆಂಗಳೂರಿಗೆ ಬಂದು ಅಂಬರೀಷ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಾರದಿರುವುದು ಅಭಿಮಾನಿಗಳಲ್ಲಿ ತೀವ್ರ ಬೇಸರ ಉಂಟುಮಾಡಿದೆ.

ಇಡೀ ಕನ್ನಡ ಚಿತ್ರರಂಗದ ದಂಡೇ ಭಾನುವಾರ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಅಗಲಿದ ಚಿತ್ರರಂಗದ ಧೃವತಾರೆಗೆ ಅಂತಿಮ ವಿದಾಯ ಸಲ್ಲಿಸಿತು. ಆದರೆ, ರಮ್ಯಾ ಮಾತ್ರ ಬರಲಿಲ್ಲ. ಬದಲಿಗೆ ಟ್ವೀಟರ್‌ನಲ್ಲಿ ಅಂಬರೀಷ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸುಮ್ಮನಾಗಿದ್ದಾರೆ. ಅಭಿಮಾನಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಸೋಮವಾರ ಮಂಡ್ಯ ಅಥವಾ ಬೆಂಗಳೂರಿನಲ್ಲಿ ನಡೆಯುವ ಅಂತಿಮ ಸಂಸ್ಕಾರದಲ್ಲಿ ರಮ್ಯಾ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಂಬಿ ಅಂಕಲ್‌ ನಿಧನದಿಂದ ದುಃಖ

ಅಂಬರೀಷ್‌ ಅಂಕಲ್‌ ಅಗಲಿಕೆ ತುಂಬಾ ದುಃಖ ಉಂಟು ಮಾಡಿದೆ. ಅವರ ಆತ್ಮಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪ ಸಲ್ಲಿಸುತ್ತೇನೆ. ಅವರ ನೆನಪು ಚಿರಸ್ಥಾಯಿ.

- ರಮ್ಯಾ, ಮಾಜಿ ಸಂಸದೆ