Asianet Suvarna News Asianet Suvarna News

#MeToo : ಈಗ ಪಾರ್ವತಿಯೂ ಮಾತನಾಡಿದ್ರು

ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್ ಗಳಲ್ಲಿ ಮೀ ಟೂ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಹಲವು ನಟಿಯರು ತಮಗಾದ ಕಿರುಕುಳದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಿದೀಘ ನಟಿ ಪಾರ್ವತಿ ಮೆನನ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. 

Actress Parvathy Lauds Bollywood Response In Me Too
Author
Bengaluru, First Published Oct 31, 2018, 12:36 PM IST
  • Facebook
  • Twitter
  • Whatsapp

ತಿರುವನಂತಪುರಂ :  ಸ್ಯಾಂಡಲ್ ವುಡ್, ಬಾಲಿವುಡ್,  ಕಾಲಿವುಡ್ ಸೇರಿದಂತೆ ವಿವಿಧ ಇಂಡಸ್ಟ್ರಿಗಳಲ್ಲಿ ಸೌಂಡ್ ಮಾಡಿದ್ದ ಮೀ ಟೂ ಬಗ್ಗೆ ಇದೀಗ ಮಿಲನ ಚೆಲುವೆ ಪಾರ್ವತಿ ಮೆನನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಇಂಡಸ್ಟ್ರಿಗಳಲ್ಲಿ ಮೀ ಟೂ ಬಗ್ಗೆ  ಸದ್ದಾಗುತ್ತಿದೆ. ಬಾಲಿವುಡ್ ಅಂಗಳದಲ್ಲಿ ದೊಡ್ಡ ನಟರ ಬಗ್ಗೆಯೂ ಅಭಿಪ್ರಾಯ ತಿಳಿಸುತ್ತಿದ್ದಾರೆ. ಅದರಂತೆಯೇ ಮಲಯಾಳಂ ಸಿನಿಮಾ ರಂಗದಲ್ಲಿಯೂ ಈ ಬಗ್ಗೆ ಬಗ್ಗೆ ಮನಬಿಚ್ಚಿ ಮಾತನಾಡುವಂತೆ ಆಗಬೇಕು ಎಂದು ಹೆಳಿದ್ದಾರೆ. 

ಯಾರು ಮುಂಚೂಣಿಯಲ್ಲಿದ್ದಾರೋ ಅಂತವರ ಬಗ್ಗೆಯೂ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು ಇವೆಲ್ಲವೂ ಕೂಡ ಆಶ್ಚರ್ಯ ಉಂಟು ಮಾಡುತ್ತಿದೆ. 

ಈ ಧ್ವನಿ ಎತ್ತುತ್ತಿದ್ದು, ಮಲಯಾಳಂ ಚಿತ್ರರಂಗದಲ್ಲಿಯೂ ಕೂಡ ಇಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದೊಂದು ಬೇರೆಯವರಿಗೆ ಎಚ್ಚರಿಕೆಯ ಸಂದೇಶವಾಗಿಯೂ ಪರಣಮಿಸಬೇಕು ಎಂದು ಮಾಮಿ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾರ್ವತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಈ ರೀತಿಯಾಗಿ ದೊಡ್ಡವರ ಬಗ್ಗೆ ನಟಿಯರು ಮಾತನಾಡುತ್ತಿರುವುದು ಸ್ವಾಗತಾರ್ಹ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 

ಅಲ್ಲದೇ ಬಾಲಿವುಡ್ ನಲ್ಲಿ ಅನೇಕ ಪ್ರಮುಖ ನಿರ್ದೇಶಕರು, ನಟರು, ನಿರ್ಮಾಪಕರ ವಿರುದ್ಧ ಮೀ ಟೂ ಆರೋಪ ಕೇಳಿ ಬಂದಿದ್ದು, ಇಂತಹ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಈ ವೇಳೆ ಹೇಳಿದರು. 

Follow Us:
Download App:
  • android
  • ios