ಬಹುಭಾಷಾ ನಟಿ, ತಮಿಳುನಾಡು ಕಾಂಗ್ರೆಸ್ ನಾಯಕಿ  ಖುಷ್ಬೂಗೆ ನಾಳೆ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ನಡೆಯಲಿದೆ.

ಚೆನ್ನೈ (ನ.03): ಬಹುಭಾಷಾ ನಟಿ ಖುಷ್ಬೂಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ನಾಳೆ ಅಪೋಲೋ ಆಸ್ಪತ್ರೆಯಲ್ಲಿ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ನಡೆಯಲಿದೆ.

ಖುಷ್ಬೂ ಹೊಟ್ಟೆಯಲ್ಲಿ ಗಂಟು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು ನಾಳೆ ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿ ಸಣ್ಣ ಆಪರೇಷನ್ ನಡೆಯಲಿದೆ. ಶಸ್ತ್ರ ಚಿಕಿತ್ಸೆ ನಂತರ 2 ವಾರ ವಿಶ್ರಾಂತಿ ಪಡೆಯಬೇಕು ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇಂದು ಕೆಲ ಪರೀಕ್ಷೆ ಮುಗಿಸಿ ತೆರಳಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಖುಷ್ಬು ಈ ಮಾಹಿತಿ ಹಂಚಿಕೊಂಡಿದ್ದಾರೆ.

Scroll to load tweet…