6ನೇ ವಯಸ್ಸಲ್ಲೇ ನನ್ನ ಮೇಲೆ ರೇಪ್‌ ಆಗಿತ್ತು ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ನಟಿ

First Published 24, Mar 2018, 1:14 PM IST
Actress Daisy Irani Reveals She Was Raped At 6 By Man Appointed As Her Guardian
Highlights

ಚಿತ್ರೋದ್ಯಮದಲ್ಲಿ ನಟಿಯರನ್ನು ಅವಕಾಶದ ಆಸೆ ತೋರಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ತಮ್ಮ ಮೇಲೆ ಆರನೇ ವಯಸ್ಸಿನಲ್ಲೇ ಅತ್ಯಾಚಾರ ನಡೆದಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಹಿರಿಯ ನಟಿ ಡೈಸಿ ಇರಾನಿ ಬಹಿರಂಗಪಡಿಸಿದ್ದಾರೆ.

ಮುಂಬೈ (ಮಾ.24): ಚಿತ್ರೋದ್ಯಮದಲ್ಲಿ ನಟಿಯರನ್ನು ಅವಕಾಶದ ಆಸೆ ತೋರಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ತಮ್ಮ ಮೇಲೆ ಆರನೇ ವಯಸ್ಸಿನಲ್ಲೇ ಅತ್ಯಾಚಾರ ನಡೆದಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಹಿರಿಯ ನಟಿ ಡೈಸಿ ಇರಾನಿ ಬಹಿರಂಗಪಡಿಸಿದ್ದಾರೆ.

1957ರಲ್ಲಿ ಮದ್ರಾಸ್‌ನಲ್ಲಿ ‘ಹಮ್‌ ಪಂಛಿ ಏಕ್‌ ಡಾಲ್‌ ಕೆ’ ಶೂಟಿಂಗ್‌ ನಡೆಯುತ್ತಿತ್ತು. ಒಂದು ರಾತ್ರಿ ಹೋಟೆಲ್‌ ಕೋಣೆಯಲ್ಲಿ ನನ್ನ ‘ರಕ್ಷಕ’ನಾಗಿದ್ದ ವ್ಯಕ್ತಿಯೇ ನನ್ನ ಮೇಲೆ ಎರಗಿದ. ಇಲ್ಲಿ ನಡೆದಿದ್ದನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಹೇಳಿ ಬೆಲ್ಟ್‌ನಿಂದ ಬಾರಿಸಿದ ಎಂದು 68 ವರ್ಷದ ಇರಾನಿ ಅವರು ತಿಳಿಸಿದ್ದಾರೆ.

ನನ್ನ ತಾಯಿಗೆ ಹೇಗಾದರೂ ಮಾಡಿ ನನ್ನನ್ನು ಚಿತ್ರನಟಿ ಮಾಡಬೇಕು ಎಂಬ ಆಸೆ ಇತ್ತು. ‘ಬೇಬಿ’ ಎಂಬ ಮರಾಠಿ ಚಿತ್ರದಲ್ಲಿ ನಟನೆ ಆರಂಭಿಸಿದ್ದೆ. ನನ್ನ ಅಂಕಲ್‌ ನಾಜರ್‌ ಜತೆ ಮದ್ರಾಸ್‌ಗೆ ಚಿತ್ರೀಕರಣಕ್ಕೆ ಹೋಗಿದ್ದಾಗ ಅತ್ಯಾಚಾರ ನಡೆದಿತ್ತು. ಆದರೂ ಮರುದಿನ ಏನೂ ಆಗಿಯೇ ಇಲ್ಲವೆಂಬಂತೆ ಶೂಟಿಂಗ್‌ನಲ್ಲಿ ಭಾಗಿಯಾದೆ. ಈ ಘಟನೆಯನ್ನು ಹಲವು ವರ್ಷಗಳ ಕಾಲ ನನ್ನ ತಾಯಿ ಬಳಿ ಹೇಳಿಯೇ ಇರಲಿಲ್ಲ. ಈಗ ಆ ವ್ಯಕ್ತಿ ಮೃತಪಟ್ಟಿದ್ದಾನೆ. ಹೆಸರಾಂತ ಗಾಯಕ ಜೋಹ್ರಾಬಾಯ್‌ ಅಂಬಾಲೆವಾಲಿ ಅವರ ಬಂಧು ಆತ. ಚಿತ್ರೋದ್ಯಮದಲ್ಲಿ ಅಪಾರ ನಂಟು ಹೊಂದಿದ್ದ ಎಂದಿದ್ದಾರೆ.

15 ವರ್ಷದವಳಿದ್ದಾಗ ಮತ್ತೊಂದು ಘಟನೆ ನಡೆಯಿತು. ನನ್ನ ತಾಯಿ ನನಗೆ ಸೀರೆ ಉಡಿಸಿ, ಎದೆಗೆ ಸ್ಪಾಂಜ್‌ ಪ್ಯಾಡ್‌ ತೊಡಿಸಿ ನಿರ್ಮಾಪಕ ಮಲ್ಲಿಕ್‌ಚಂದ್‌ ಕೊಚ್ಚಾರ್‌ ಬಳಿಗೆ ಕರೆದೊಯ್ದಿದ್ದರು. ಅವರ ಕಚೇರಿಯಲ್ಲಿ ನನ್ನನ್ನು ಒಬ್ಬಳನ್ನೇ ಬಿಟ್ಟು ಹೊರಗೆ ಹೊರಟುಬಿಟ್ಟಳು. ಸೋಫಾ ಮೇಲೆ ನನ್ನ ಜತೆ ಕೂತ ಮಲ್ಲಿಕ್‌ಚಂದ್‌, ಮೈಮುಟ್ಟಲು ಆರಂಭಿಸಿದರು. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಾಯಿತು. ಕೂಡಲೇ ಸ್ಪಾಂಜ್‌ ಪ್ಯಾಂಡ್‌ ಅವರನ್ನು ಕೈಗಿಟ್ಟಿದ್ದೆ ಎಂದು ತಿಳಿಸಿದ್ದಾರೆ.

ನಟ ಫರ್ಹಾನ್‌ ಅಖ್ತರ್‌ ಹಾಗೂ ನಿರ್ದೇಶಕ ಫರ್ಹಾ ಖಾನ್‌ ಅವರ ಬಂಧುವಾಗಿರುವ ಡೈಸಿ ಅವರು ಕೊನೆಯದಾಗಿ 2014ರಲ್ಲಿ ಶಾರುಖ್‌ ನಟನೆಯ ಹ್ಯಾಪಿ ನ್ಯೂ ಇಯರ್‌ ಸಿನಿಮಾದಲ್ಲಿ ಅಭಿನಯಿಸಿದ್ದರು.

1950ರಲ್ಲೇ ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಡೇಜಿ ಇರಾನಿ ಅವರು, 1957ರಲ್ಲಿ ‘ಹಮ್‌ ಪಂಛಿ ಏಕ್‌ ದಾಲ್‌ ಕೆ’ ಚಿತ್ರದ ಚಿತ್ರೀಕರಣಕ್ಕಾಗಿ ಚೆನ್ನೈಗೆ ತೆರಳಿದ್ದ ಸಂದರ್ಭದಲ್ಲಿ ತಾವು ಇನ್ನೂ 6 ವರ್ಷದ ಬಾಲಕಿಯಾಗಿದ್ದಾಗ ತನ್ನ ಪೋಷಕರೊಬ್ಬರಿಂದಲೇ ಅತ್ಯಾಚಾರಕ್ಕೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಮದ್ರಾಸ್‌ನಲ್ಲಿರಬೇಕಾದರೆ, ಒಂದು ರಾತ್ರಿ ಪ್ರಸಿದ್ಧ ಗಾಯಕ ಝೊಹ್ರಾಬಾಯಿ ಅಂಬಲೆವಾಲಿ ಎಂಬುವರ ಸಂಬಂಧಿಕನಾದ ನಜರ್‌ ಎಂಬುವರು ನನ್ನ ಮೇಲೆ ಅತ್ಯಾಚಾರವೆಸಗಿದ್ದ. ಅಲ್ಲದೆ, ತಾನು ಧರಿಸಿದ್ದ ಸೊಂಟದ ಬೆಲ್ಟ್‌ನಿಂದ ಥಳಿಸಿ, ಈ ವಿಚಾರ ಹೊರಗೇನಾದರೂ ಬಹಿರಂಗಪಡಿಸಿದಲ್ಲಿ ಹತ್ಯೆಗೈಯ್ಯುವುದಾಗಿ ಬೆದರಿಸಿದ್ದ. ಆದರೆ, ಆತ ಇದೀಗ ಸಾವನ್ನಪ್ಪಿದ್ದಾನೆ. ಆದರೆ, ಅಂದಿನ ಕಹಿ ಘಟನೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಇರಾನಿ ತಿಳಿಸಿದ್ದಾರೆ.

ನಾನು 15 ವರ್ಷದವಳಾಗಿರಬೇಕಾದರೆ, ನನ್ನ ಅಮ್ಮ ನನಗೆ ಸೀರೆ ತೊಡಿಸಿ, ಸಿಂಗಾರ ಮಾಡಿ ಮೇರೆ ಹುಜೂರ್‌ ಚಿತ್ರ ನಿರ್ಮಾಣಕ್ಕಾಗಿ ಯೋಜಿಸುತ್ತಿದ್ದ ನಿರ್ಮಾಪಕ ಮಲ್ಲಿಕ್‌ಚಂದ್‌ ಕೊಚಾರ್‌ ಕಚೇರಿಗೆ ಕರೆದೊಯ್ದಿದ್ದರು. ಅಲ್ಲಿಯೂ ಸೋಫಾದ ಮೇಲೆ ಅವರು ನನ್ನ ಮೈಯನ್ನು ಮುಟ್ಟಲು ಶುರುವಿಟ್ಟುಕೊಂಡರು. ಮುಂದೆ ಏನಾಗಲಿದೆ ಎಂಬುದನ್ನು ಮನಗಂಡಿದ್ದ ನಾನು ಎಚ್ಚರ ವಹಿಸಿದ್ದೆ ಎಂದು ಹೇಳಿದ್ದಾರೆ.

ಡೇಜಿ ಇರಾನಿ ಫರ್ಹಾನ್‌ ಅಖ್ತರ್‌ ಮತ್ತು ಜೋಯಾ ಅಖ್ತರ್‌ ಅವರ ಸಹೋದರಿಯಾಗಿದ್ದಾರೆ.

loader