ಶೂಟಿಂಗ್  ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಅಕ್ರಮವಾಗಿ ಕಾರಿನಲ್ಲಿ ಪ್ರವೇಶಿಸಿದ್ದ ದುಷ್ಕರ್ಮಿಗಳು ಭಾವನಾ ಅವರನ್ನು ಅಪಹರಿಸಿದ್ದಾರೆ.

ಎರ್ನಾಕುಲಂ (ಫೆ,18): ಖ್ಯಾತ ಮಲಯಾಳಂ ನಟಿ ಭಾವನಾ ಅವರನ್ನು ಅಪಹರಿಸಿ ಬಳಿಕ ಬಿಟ್ಟು ಪರಾರಿಯಾದ ಘಟನೆ ಎರ್ನಾಕುಲಂ ಬಳಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೂಟಿಂಗ್ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಅಕ್ರಮವಾಗಿ ಕಾರಿನಲ್ಲಿ ಪ್ರವೇಶಿಸಿದ್ದ ದುಷ್ಕರ್ಮಿಗಳು ಭಾವನಾ ಅವರನ್ನು ಅಪಹರಿಸಿದ್ದಾರೆ.

ಕಾರಿನ ಚಾಲಕನನ್ನು ಬೆದರಿಸಿ ರಸ್ತೆ ಮಾರ್ಗ ಬದಲಿಸಿದ್ದ ಗ್ಯಾಂಗ್, ಕಾರಿನಲ್ಲೇ ಒಂದು ಗಂಟೆಯ ಬಳಿಕ

 ಪಳರಿವಟ್ಟಂ ಬಳಿ ನಟಿಯನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಟಿ ಭಾವನಾ ಕಾರು ಚಾಲಕನನ್ನು ಪೊಲೀಸ್ರು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ದುಷ್ಕರ್ಮಿಗಳಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಬಚ್ಚನ್​, ಜಾಕಿ, ರೋಮಿಯೋ ಸೇರಿ ಚಿತ್ರಗಳು ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಭಾವನಾ ಅಭಿನಯಿಸಿದ್ದಾರೆ.