ಇದು ನಟ ಶಿವರಾಜ್ ಕುಮಾರ್ ಅವರ ಸರಳತೆಗೆ ಒಂದು ಉದಾಹರಣೆಯಾಗಿದೆ. ದಸರಾ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ಸಾಮಾನ್ಯರಂತೆ ಕುಳಿತು ದಸರಾ ವೀಕ್ಷಿಸಿದ್ದಾರೆ.
ಮೈಸೂರು: ನಟ ಶಿವರಾಜ್ ಕುಮಾರ್ ಅವರು ಜನರ ಮಧ್ಯೆಯೇ ಕುಳಿತು ದಸರಾ ವೀಕ್ಷಿಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಜ್ಯಾದ್ಯಂತ ವಿಲನ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಬ್ಯುಸಿಯಾಗಿದ್ದ ನಟ ಶಿವರಾಜ್‌ಕುಮಾರ್ ಜಂಬೂ ಸವಾರಿಯನ್ನು ಮಾತ್ರ ಮಿಸ್ ಮಾಡಿಕೊಳ್ಳಲಿಲ್ಲ.
ಮೈಸೂರಿಗೆ ಪತ್ನಿ ಗೀತಾ ಅವರೊಂದಿಗೆ ಆಗಮಿಸಿದ್ದ ಶಿವರಾಜ್‌ಕುಮಾರ್ ಹೈವೇ ವೃತ್ತದ ಬಳಿ ರಸ್ತೆಯ ಬದಿಯಲ್ಲೇ ಕೂತು ಜಂಬೂ ಸವಾರಿ ವೀಕ್ಷಿಸಿದರು. ಹೋಟೆಲ್‌ವೊಂದರ ಮುಂಭಾಗ ಅವರಿಗೆ ರಸ್ತೆ ಬದಿ ಕುರ್ಚಿ ಹಾಕಿಕೊಡಲಾಗಿತ್ತು.
