ಬಿಜೆಪಿ ಕ್ಷಮೆ ಕೇಳದಿದ್ದರೆ ಕೋರ್ಟ್'ಗೆ

First Published 4, Apr 2018, 10:29 AM IST
Actor Chethan anger on BJP Leaders
Highlights

ಸರ್ಕಾರದ ವಿರುದ್ಧ ಹೋರಾಟ ನಡೆಸಿದೆವು. ಸಂವಿಧಾನದ ಚೌಕಟ್ಟಿನಲ್ಲಿ ಅಹಿಂಸಾವಾದದ ಹೋರಾಟ ನಡೆಸಿದ್ದು, ಎಲ್ಲಿಯೂ ಕಾನೂನು ಉಲ್ಲಂಘಿಸಲಿಲ್ಲ

ಬೆಂಗಳೂರು(ಏ.04): ದಿಡ್ಡಳ್ಳಿ ಆದಿವಾಸಿಗಳ ಹೋರಾಟವನ್ನು ನಕ್ಸಲ್ ಪ್ರೇರಿತ ಹೋರಾಟ ಎಂದು ಚಾರ್ಜ್'ಶೀಟ್ ಬಿಡುಗಡೆ ಮಾಡಿರುವ ಬಿಜೆಪಿ ಅದನ್ನು ಹಿಂಪಡೆದು ಕ್ಷಮೆ ಕೋರದಿದ್ದರೆ ಕಾನೂನು ಹೋರಾಟ ನಡೆಸುವು ದಾಗಿ ಚಲನಚಿತ್ರ ನಟ ಚೇತನ್ ಎಚ್ಚರಿಕೆ  ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದ ಅವರು, ದಿಡ್ಡಳ್ಳಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿದೆವು. ಸಂವಿಧಾನದ ಚೌಕಟ್ಟಿನಲ್ಲಿ ಅಹಿಂಸಾವಾದದ ಹೋರಾಟ ನಡೆಸಿದ್ದು, ಎಲ್ಲಿಯೂ ಕಾನೂನು ಉಲ್ಲಂಘಿಸಲಿಲ್ಲ. ಹೋರಾಟದ ಫಲವಾಗಿ ಪ್ರಸ್ತುತ 528 ಮನೆಗಳು ನಿರ್ಮಾಣವಾಗಿದ್ದು, ಇನ್ನೂ ಸಾವಿರ ಮನೆಗಳನ್ನು ಕಟ್ಟಲಾಗುತ್ತಿದೆ. ದಿಡ್ಡಳ್ಳಿಯ ಆದಿವಾಸಿಗಳು ಕೂಡ  ನಮ್ಮವರಾಗಿದ್ದು  ಅವರ ಪರ ಹೋರಾಟಕ್ಕೆ ನಕ್ಸಲ್ ಹಣೆಪಟ್ಟಿ ಕಟ್ಟಿರುವ ಬಿಜೆಪಿ ಮುಖಂಡರು ಕ್ಷಮೆ ಕೋರಲೇಬೇಕು ಎಂದು ವಾಗ್ದಾಳಿ ನಡೆಸಿದರು. ಚಾರ್ಜ್'ಶೀಟ್ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.

loader