ಹನಿಟ್ರ್ಯಾಪ್ ಬಗ್ಗೆ ಸಚಿವ ಕೆಎನ್ ರಾಜಣ್ಣ ಅವರು ಹೇಳಿಕೆ ನೀಡಿದ್ದು ಈಗ ಭಾರೀ ಚರ್ಚೆ ಆಗ್ತಿದೆ. ನಟ ಚೇತನ್ ಅಹಿಂಸ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಹನಿಟ್ರ್ಯಾಪ್ ವಿಚಾರ ಭಾರೀ ಸೌಂಡ್ ಮಾಡ್ತಿದೆ. ಈಗ ಸಚಿವ ಕೆ ಎನ್ ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ಮಾತಾಡಿರೋದು ಇನ್ನಷ್ಟು ಸೌಂಡ್ ಮಾಡ್ತಿದೆ. ಇನ್ನು ಬ್ಲ್ಯೂ ಜೀನ್ಸ್ ಹಾಕಿಕೊಂಡು ಬಂದಿದ್ದ ಹುಡುಗಿ ಹನಿಟ್ರ್ಯಾಪ್ ಮಾಡಲು ಪ್ಲ್ಯಾನ್ ಮಾಡಿದ್ದಳು ಎಂಬ ರಾಜಣ್ಣ ಹೇಳಿಕೆಯನ್ನು ಚೇತನ್ ಅಹಿಂಸ ಪ್ರಶ್ನೆ ಮಾಡಿದ್ದಾರೆ.
“‘ಬ್ಲೂ ಜೀನ್ಸ್ ಧರಿಸಿದ ಹುಡುಗಿ ನನ್ನನ್ನು ಹನಿ ಟ್ರ್ಯಾಪ್ ಮಾಡಲು ಬಂದಳು' ಎಂದು ಕೆ ಎಂ ರಾಜಣ್ಣರವರು ಹೇಳಿದ್ದಾರೆ. ಆಕೆ 'ಹನಿ ಟ್ರ್ಯಾಪ್'ಗೆ ಬಂದಿದ್ದಾಳೆಂದು ನಿಮಗೆ ಹೇಗೆ ಗೊತ್ತು? ಬ್ಲೂ ಜೀನ್ಸ್ ಧರಿಸುವ ಪ್ರತಿಯೊಬ್ಬ ಮಹಿಳೆಯೂ 'ಹನಿ ಟ್ರ್ಯಾಪಿಂಗ್' ಉದ್ದೇಶ ಹೊಂದಿದ್ದಾರೆಯೇ? ಪುರುಷಪ್ರಧಾನದ ಮನಸ್ಸು ಹೀಗೆ ಯೋಚಿಸುತ್ತದೆ. ರಾಜಣ್ಣ ಹೇಳುವುದು ನಿಜವಾಗಿದ್ದರೆ, ಸುದ್ದಿಗಳಿಗಾಗಿ ತನ್ನನ್ನು ತಾನು ಬಲಿಪಶು ಮಾಡಿಕೊಳ್ಳುವ ಬದಲು ಈ ಮಹಿಳೆಯ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು” ಎಂದು ಚೇತನ್ ಅಹಿಂಸ ಹೇಳಿದ್ದಾರೆ.
ʼಬೆಳ್ತಂಗಡಿಯಲ್ಲಿ 346 ಅಸಹಜ ಸಾವಾಗಿದೆ- ನಟ ಚೇತನ್ ಅಹಿಂಸ ಸ್ಫೋಟಕ ಹೇಳಿಕೆ!
“ನನ್ನ ಮೇಲೆಯೂ ಹನಿಟ್ರ್ಯಾಪ್ ಆಗಿದೆ. ಈ ಬಗ್ಗೆ ಇಂದು ಗೃಹ ಸಚಿವರಿಗೆ ದೂರು ನೀಡ್ತೀನಿ. ನನಗೆ ಎರಡು ಬಾರಿ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಓರ್ವ ಹುಡುಗ ಎರಡು ಬಾರಿ ಬಂದಿದ್ದ. ಆದರೆ, ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಇದ್ದರು” ಎಂದು ಸಹಕಾರ ಸಚಿವರು ಹೇಳಿದ್ದರು.
ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿ, “ಹನಿಟ್ರ್ಯಾಪ್ ಬಗ್ಗೆ ದೂರು ಕೊಡ್ತೀನಿ. ಉನ್ನತ ಮಟ್ಟದ ತನಿಖೆ ಆಗಬೇಕು. ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಗೃಹ ಸಚಿವರಿಗೆ ನಾನು ದೂರು ಕೊಡ್ತೀನಿ. ನಿರಂತರ ಕಾರ್ಯಕ್ರಮವಿದ್ದ ಕಾರಣ ಇಷ್ಟು ದಿನ ನನಗೆ ದೂರು ಕೊಡೋಕೆ ಆಗಿರಲಿಲ್ಲ. ನಾನೇ ಇಂದು ಕೂತು ದೂರು ರೆಡಿ ಮಾಡಿದ್ದೇನೆ” ಎಂದಿದ್ದಾರೆ.
“ಗೃಹ ಸಚಿವ ಪರಮೇಶ್ವರ್ ಅವರು ಎಲ್ಲಿದ್ದಾರೆ ಅಂತ ನೋಡಿ ಅಲ್ಲಿಗೆ ಹೋಗಿ ದೂರು ಕೊಡ್ತೀನಿ. ನನ್ನ ಬಳಿ ಹನಿಟ್ರ್ಯಾಪ್ ಕುರಿತು ಯಾವುದೇ ದಾಖಲೆ ಇಲ್ಲ, ಆದರೆ ಒಟ್ಟು ಮೂರು ಪುಟ ಇರುವ ದೂರು ಕೊಡ್ತೀನಿ. ನನ್ನ ಬೆಂಗಳೂರು ಮನೇಲಿ ಸಿಸಿಟಿವಿ ಇರಲಿಲ್ಲ. ಆದ್ದರಿಂದ ಸಿಸಿಟಿವಿ ವಿಡಿಯೋ ಕೂಡ ಇಲ್ಲ. ಯಾರು ಬಂದು ಹೋದ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡ್ತೀನಿ. ಅಪರಿಚಿತರು ಅಂತ ದೂರಿನಲ್ಲಿ ಹೇಳಿದ್ದೇನೆ” ಎಂದು ರಾಜಣ್ಣ ಹೇಳಿದ್ದಾರೆ.
“ಹನಿಟ್ರ್ಯಾಪ್ ಮಾಡುವ ಉದ್ದೇಶದಿಂದ ನನ್ನ ಮನೆಗೆ ಎರಡು ಸಲ ಓರ್ವ ಹುಡುಗ ಬೇರೆ ಬೇರೆ ಹುಡುಗಿಯರನ್ನು ಕರೆದುಕೊಂಡು ಬಂದಿದ್ದ. ಮೊದಲ ಬಾರಿ ನಾನು ಹೈಕೋರ್ಟ್ ವಕೀಲ ಎಂದು ಬಂದು ಪರಿಚಯಿಸಿಕೊಂಡರು. 2ನೇ ಬಾರಿ ವಕೀಲ ಅಂತ ಪರಿಚಯಿಸಿಕೊಂಡಿದ್ದರು. ನನಗೆ ಪೋಟೋ ತೋರಿಸಿದರೆ ಗುರುತು ಹಿಡಿತೀನಿ” ಎಂದು ರಾಜಣ್ಣ ಹೇಳಿದ್ದಾರೆ.
