ಬೆಳಗಾವಿ[ಏ. 17] ಪೋಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ವೈದಕೀಯ ಪರೀಕ್ಷೆಗೆ ಕರೆದಂತ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ರುಕ್ಮಿಣಿ ನಗರದ ಚಂದ್ರು ಮೋಹನ ಹರಿಜನ (26) ಪರಾರಿಯಾದ ಆರೋಪಿ.  ಪೋಕ್ಸೋ ಕಾಯ್ದೆ ಅಡಿಯಲ್ಲಿ ಮಂಗಳವಾರ ಮಾಳಮಾರುತಿ ಠಾಣೆಯ ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆಗಾಗಿ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು, ಈ ವೇಳೆ ಮೂತ್ರ ವಿಸರ್ಜನೆ ಹೋಗಿ ಬರುವುದಾಗಿ ಕರೆತಂದ ಪೊಲೀಸರಿಗೆ ತಿಳಿಸಿದ್ದಾನೆ. 

ಶ್ವಾನದೊಂದಿಗೆ ಪತ್ನಿಯನ್ನು ಸೆಕ್ಸ್ ಗೆ ದೂಡಿದ್ದ ಬೆಳಗಾವಿ ಪತಿಗೆ ಶಿಕ್ಷೆ

ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಹೋಗಿದ್ದಾನೆ. ಇದನ್ನು ನೋಡಿದ ಪೊಲೀಸರು ಆರೋಪಿ ಮಾತಿನ ಮೇಲೆ ಭರವಸೆ ವ್ಯಕ್ತವಾಗಿದ್ದರಿಂದ ಮರಳಿ ಬರುವ ನೀರಿಕ್ಷೆ ಹೊಂದಿದ್ದರು. ಕೆಲ ಸಮಯ ಕಳೆದರೂ ಆರೋಪಿ ಶೌಚಾಲಯದ ಕೊಠಡಿಯಿಂದ ಬಾರದೇ ಇರುವುದರಿಂದ ಅನುಮಾನಗೊಂಡು ಹೋಗಿ ನೋಡಿದ್ದಾರೆ.

ಅಷ್ಟರಲ್ಲಿ ಆರೋಪಿ ಚಂದ್ರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಈ ಕುರಿತು ಮಾಳಮಾರುತಿ ಠಾಣೆಯ ಪೊಲೀಸರು, ನಗರದ ಎಪಿಎಂಸಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.