ಬೆಳಗಾವಿ(ಏ. 11)  ಪತ್ನಿಗೆ ನಾಯಿ ಮರಿ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಡ ಹೇರಿ  ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನಿಗೆ 10 ವರ್ಷ ಜೈಲು, ಮತ್ತು 11,500 ದಂಡ ವಿಧಿಸಿ ಬುಧವಾರ ಬೆಳಗಾವಿಯ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಆರೋಪಿಯು ತನ್ನ ಪತ್ನಿಗೆ ಮೊಬೈಲ್‌ನಲ್ಲಿ ಅನೈಸರ್ಗಿಕ ಲೈಂಗಿಕ ಕ್ರಿಯೆಯ ವಿಡಿಯೋಗಳನ್ನು ತೋರಿಸಿ, ಇದೇ ರೀತಿಯಲ್ಲಿ ಲೈಂಗಿಕ ಚಟುವಟಿಕೆ ನಡೆಸುವಂತೆ ಪತ್ನಿಗೆ  ಒತ್ತಾಯಿಸಿದ್ದ.

ನಿಸರ್ಗಕ್ಕೆ ವಿರುದ್ಧ ಲೈಂಗಿಕ ಕ್ರಿಯೆ ವಿಡಿಯೋ ವೈರಲ್, 7 ಜನರ ಬಂಧನ

ಇದಕ್ಕೆ ವಿರೋಧಿಸಿದ ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಾನು ಹೇಳಿದಂತೆ ಕೇಳದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ.  ಅಲ್ಲದೇ ಪಕ್ಕದ ಮನೆಯಲ್ಲಿರುವ ಐದಾರು ತಿಂಗಳಿನ ನಾಯಿಮರಿಯನ್ನು ಕರೆತಂದು ನಿಸರ್ಗಕ್ಕೆ ವಿರುದ್ಧವಾದ ರೀತಿ ಲೈಂಗಿಕ ಕ್ರಿಯೆ ಮಾಡಿಸಿದ್ದ ಎಂದು ಪತ್ನಿ ಆರೋಪಿಸಿದ್ದರು.

ಈ ಸಂಬಂಧ ಮಹಿಳೆ ಕಟಕೋಳ ಠಾಣೆಯಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದಳು. ಅದರಂತೆ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.