ಕೋಲಾರದಲ್ಲಿ ಪ್ರತ್ಯೇಕ ಸರಣಿ ಅಪಘಾತ; ಮೂವರ ಸಾವು, ಹಲವರಿಗೆ ಗಾಯ

First Published 1, Apr 2018, 4:07 PM IST
Accident in Kolara
Highlights

ಇಂದು ಕೊಲಾರದಲ್ಲಿ ಪ್ರತ್ಯೇಕ  ಸರಣಿ ಅಪಘಾತಗಳು ನಡೆದಿವೆ. 

ಕೋಲಾರ (ಏ. 01):  ಇಂದು ಕೊಲಾರದಲ್ಲಿ ಪ್ರತ್ಯೇಕ  ಸರಣಿ ಅಪಘಾತಗಳು ನಡೆದಿವೆ. 

ಕೆಜಿಎಫ್ ತಾಲ್ಲೂಕು ಕಣ್ಣೀರು ಬಳಿ ಕಾರು ಹರಿದು ಸ್ಥಳದಲ್ಲಿಯೇ ವ್ಯಕ್ತಿಯೊಬ್ಬ  ಸಾವನ್ನಪ್ಪಿದ್ದು, ನಾಲ್ಕು ಜನರಿಗೆ ಗಾಯಗಳಾಗಿದ್ದು   ಆಸ್ಪತ್ರೆಗೆ ದಾಖಲಿಸಲಾಗಿದೆ. 
ಮೃತ ವ್ಯಕ್ತಿ ಬೆಂಗಳೂರು ಮೂಲದ ಮುನಿಯಪ್ಪ ಎಂದು ತಿಳಿದು ಬಂದಿದೆ. 

ಕಣ್ಣೂರು ಜಾತ್ರೆಗೆ ಆಗಮಿಸಿದ ಮುನಿಯಪ್ಪ  ಪತ್ನಿ,ಮಕ್ಕಳ ಜೊತೆ ರಸ್ತೆಯ ಬದಿಯಲ್ಲಿ  ನಿಂತಿದ್ದಾಗ, ಕುಡಿದು ಕಾರು ಚಾಲನೆ ಮಾಡಿಕೊಂಡು ಅಡ್ಡಾದಿಡ್ಡಿಯಾಗಿ  ಜನರ ಮೇಲೆ ಕಾರು ಓಡಿಸಿದ್ದಾನೆ. ಅಲ್ಲಿಯೇ ನಿಂತಿದ್ದ ಮುನಿಯಪ್ಪ ಮೇಲೆ ಕಾರು ಹರಿದಿದೆ.  ಕೆಲವರಿಗೆ  ಗಾಯಗಳಾಗಿವೆ.  ಗಾಯಾಳುಗಳನ್ನು  ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿರುಪತಿಯಿಂದ ವಿ. ಕೋಟಗೆ ಬರುವಾಗ ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು  ನಾಲ್ವರಿಗೆ  ಗಂಭೀರ ಗಾಯಗಳಾಗಿವೆ.  ಚಿತ್ತೂರು ಜಿಲ್ಲೆಯ ಪಲಪಾಕಂ ಗ್ರಾಮದ ಬಳಿ  ಈ   ಅಪಘಾತ ಸಂಭವಿಸಿದೆ. 
ಕೋಲಾರ ಜಿಲ್ಲೆಯ ವಿಕೋಟ ಗ್ರಾಮದ ಉಪನ್ಯಾಸಕ ಸಂಪಂಗಿ ರೆಡ್ಡಿ,ಗೋವಿಂದ ರೆಡ್ಡಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.   ಮಕ್ಕಳ ಪರೀಕ್ಷೆ ಮುಗಿಸಿಕೊಂಡು ಕುಟುಂಬ ಸಮೇತರಾಗಿ ಸ್ವಗ್ರಾಮಕ್ಕೆ ಬರುವಾಗ ಅಪಘಾತ ಸಂಭವಿಸಿದೆ. 
 

loader