ಬೇಸಿಗೆಯಲ್ಲಿ ಮೈಯನ್ನು ತಂಪಾಗಿ ಇಡುವ, ಚಳಿಗಾಲ, ಮಳೆಗಾಲದಲ್ಲಿ ಮೈಯನ್ನು ಬಿಸಿ ಮಾಡುವ ವಿಶೇಷ ಕೋಟ್‌ ಒಂದನ್ನು ತಯಾರಿಸಲಾಗಿದೆ.

ಪಟನಾ(ಮಾ.09): ಬೇಸಿಗೆಯಲ್ಲಿ ಮೈಯನ್ನು ತಂಪಾಗಿ ಇಡುವ, ಚಳಿಗಾಲ, ಮಳೆಗಾಲದಲ್ಲಿ ಮೈಯನ್ನು ಬಿಸಿ ಮಾಡುವ ವಿಶೇಷ ಕೋಟ್‌ ಒಂದನ್ನು ತಯಾರಿಸಲಾಗಿದೆ.

ಬ್ಯಾಟರಿ ಆಧರಿತವಾಗಿರುವ ಈ ಜಾಕೆಟ್‌'ನಲ್ಲಿ 2 ಬಟನ್‌'ಗಳ ಆಯ್ಕೆಯಿದೆ. ಕೆಂಪು ಬಟನ್‌ ಬಿಸಿಗಾಗಿ ಮತ್ತು ಹಸಿರು ಬಟನ್‌ ಅದನ್ನು ಕಡಿಮೆಗೊಳಿಸುವುದಕ್ಕಾ ಗಿದೆ. ಜಾಕೆಟ್‌ನಲ್ಲಿ ತಂಪು ಮತ್ತು ಬಿಸಿ ಗಾಳಿ ಸೂಸುವ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಬಳಕೆದಾರರು ತಮಗೆ ಬೇಕಾದ ಬಟನ್‌ ಒತ್ತಿ ಬೇಕಾದಂತೆ ಜಾಕೆಟ್‌ ಬಳಸಿ ಕೊಳ್ಳಬಹುದಾಗಿದೆ.

ಸದ್ಯಕ್ಕೆ ಸ್ಲೀವ್‌ಲೆಸ್‌ ಜಾಕೆಟ್‌ಗೆ 18000 ರು. ಮತ್ತು ಪೂರ್ಣತೋಳಿನ ಕೋಟ್‌ಗೆ 25000 ರು. ನಿಗದಿಪಡಿಸಲಾಗಿದೆ.