ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ಆಡುಂಬೊಲವಾಗಿರುವ ಕಾಶ್ಮೀರಕ್ಕೆ ಇದೀಗ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಅಲ್‌ಖೈದಾ ಪ್ರವೇಶವಾಗಿರುವಂತಿದೆ.
ನವದೆಹಲಿ(ಆ.06): ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ಆಡುಂಬೊಲವಾಗಿರುವ ಕಾಶ್ಮೀರಕ್ಕೆ ಇದೀಗ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಅಲ್ಖೈದಾ ಪ್ರವೇಶವಾಗಿರುವಂತಿದೆ.
ಆ.1ರಂದು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಅಬು ದುಜಾನಾ ಹಾಗೂ ಆರೀಫ್ ಲೆಲ್ಹಾರಿ ಎಂಬ ಉಗ್ರರು ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ಗಳು ಅಲ್ಲ. ಅವರಿಬ್ಬರೂ ಅಲ್ಖೈದಾ ಸಂಘಟನೆಯವರು. ಇದರೊಂದಿಗೆ ದೇಶದಲ್ಲಿ ಅಲ್ಖೈದಾ ಉಗ್ರರ ಮೊದಲ ಬಲಿ ಆದಂತಾಗಿದೆ ಎಂಬ ಸುದ್ದಿ ಕಾಶ್ಮೀರದಲ್ಲಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಸಾಯುವ ಮುನ್ನ ಬಂಧುಗಳಿಗೆ ಮಾಡಿದ ದೂರವಾಣಿ ಕರೆಯಲ್ಲಿ, ತಾನು ಹಾಗೂ ದುಜಾನಾ ಅಲ್ಖೈದಾ ಸಂಘಟನೆಯವರು. ತಮ್ಮ ಶವದ ಮೇಲೆ ಪಾಕಿಸ್ತಾನದ ಧ್ವಜ ಹೊದಿಸಬೇಡಿ. ಅಲ್ಖೈದಾ ‘ಧ್ವಜ ಹೊದಿಸಿ ಎಂದು ಆರೀಫ್ ಕೋರಿಕೊಳ್ಳುವ ಆಡಿಯೋ ಹರಿದಾಡುತ್ತಿದೆ.
ಅಲ್ಲದೆ ಅಲ್ ಖೈದಾ ಕಾಶ್ಮೀರ ಘಟಕ ‘ಅನ್ಸರ್ ಘಜ್ವಾತ್ ಉಲ್ ಹಿಂದ್’ ಸಂಘಟನೆಯ ಮುಖ್ಯಸ್ಥ ಝಾಕೀರ್ ಮೂಸಾ ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಹತ ಉಗ್ರರಿಬ್ಬರೂ ಅಲ್ಖೈದಾದವರು ಎಂದು ಹೇಳಿಕೊಂಡಿದ್ದಾನೆ. ಹಿಜ್ಬುಲ್ ಮುಜಾಹಿದೀನ್ ಸಂಘಟನೆ ತೊರೆದು ಅಲ್ಖೈದಾ ಸೇರಿರುವ ಮೂಸಾನ ಧ್ವನಿ, ಆತ ಹಿಂದೆ ಬಿಡುಗಡೆ ಮಾಡಿದ್ದ ಆಡಿಯೋ ಕ್ಲಿಪ್ಗಳ ಜತೆ ಹೊಂದಾಣಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದನ್ನು ನಾವು ಖಚಿತಪಡಿಸಲಾಗದು ಎಂ ದು ಡಿಜಿಪಿ ಎಸ್.ಪಿ. ವೈದ್ ಹೇಳಿದ್ದಾರೆ.
