ತಂದೆಯ ಅಗಲಿಕೆಯಿಂದ ಕಂಗೆಟ್ಟವರಂತೆ ಕಂಡು ಬಂದ ಅಂಬರೀಷ್ ಪುತ್ರ ಅಭಿಷೇಕ್ ರಾತ್ರಿಯಿಡೀ ಪಾರ್ಥಿವ ಶರೀರದ ಎದುರು ನಿಂತೇ ಇದ್ದರು.
ಮಂಡ್ಯ: ತಂದೆಯ ಅಗಲಿಕೆಯಿಂದ ಕಂಗೆಟ್ಟವರಂತೆ ಕಂಡು ಬಂದ ಅಂಬರೀಷ್ ಪುತ್ರ ಅಭಿಷೇಕ್ ರಾತ್ರಿಯಿಡೀ ಪಾರ್ಥಿವ ಶರೀರದ ಎದುರು ನಿಂತಿದ್ದರು.
ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದ ಜನಸಮೂಹವನ್ನು ಮೂಕವಿಸ್ಮಿತರಾಗಿ ನೋಡುತ್ತಿದ್ದರು. ಆಗಾಗ ಜನರತ್ತ ಕೈಮುಗಿದು ನಮಿಸುತ್ತಿದ್ದರು.
ಅಭಿಮಾನಿಗಳ ಅಭಿಮಾನ ಕಂಡ ಅಭಿಷೇಕ್ ಪದೇ ಪದೇ ಕಣ್ಣೀರಿಡುತ್ತಾ ದುಃಖಿಸುತ್ತಿದ್ದರು. ಅಂತಿಮ ದರ್ಶನಕ್ಕೆ ಆಗಮಿಸಿದ ವಿಶೇಷ ಚೇತನರೊಬ್ಬರನ್ನು ಪಕ್ಕಕ್ಕೆ ಕರೆದು ಅಭಿಷೇಕ್ ತಮ್ಮ ತಂದೆಗೆ ನಮಿಸುವುದಕ್ಕೆ ನೆರವಾದರು.
