ಜೈಪುರ :  ಪಾಕಿಸ್ತಾನದ ಎಫ್‌- 16 ವಿಮಾನವನ್ನು ಹೊಡೆದುರುಳಿಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಮಿಗ್‌- 21 ಸ್ವಾರ್ಡ್‌ನ್‌ (ವಾಯುಪಡೆಯ ಘಟಕ) ವಿಶೇಷ ಸಮವಸ್ತ್ರ ಮತ್ತು ಹಾಗೂ ಬಿರುದು ಹೊಂದಿರುವ ವಿಶೇಷ ಮುದ್ರೆಯನ್ನು ಪಡೆದುಕೊಂಡಿದೆ. 

ಈ ಮುದ್ರೆಯಲ್ಲಿ ಅಭಿನಂದನ್‌ ಪ್ರತಿನಿಧಿಸಿದ್ದ ಅವರ ಮಿಗ್‌- 21 ಸ್ವಾರ್ಡ್‌ನ್‌ ಅನ್ನು ಘಾತುಕ ಗಿಡುಗ ಎಂದು ಬಣ್ಣಿಸಲಾಗಿದೆ. ಅಲ್ಲದೇ ‘ಆಮ್ರಾಮ್‌ ಡಾಡ್ಜರ್‌’ ಅಂದರೆ ಎಫ್‌- 16 ವಿಮಾನವನ್ನು ಹೊಡೆದುರುಳಿಸಿದ ಪಡೆ ಎಂದು ಬಣ್ಣಿಸಲಾಗಿದೆ. 

ವೈರಲ್ ಚೆಕ್: ಪುಲ್ವಾಮಾ ದಾಳಿ ಬಿಜೆಪಿಯ ಪಿತೂರಿ ಎಂದರೇ ಅಭಿನಂದನ್?

ಇದಲ್ಲದೇ ಫೆ.27ರಂದು ಪಾಕಿಸ್ತಾನ ಜೊತೆ ಡಾಗ್‌ಫೈಟ್‌ನಲ್ಲಿ ಭಾಗಿಯಾದ ಸುಖೋಯ್‌-30 ಸ್ವಾರ್ಡನ್‌ಗೆ ನೀಡಲಾದ ಮುದ್ರೆಯಲ್ಲಿ ಸುಖೋಯ್‌ ಎಸ್‌ಯು 30 ಯುದ್ಧ ವಿಮಾನ ಎಫ್‌- 16 ವಿಮಾನದಿಂದ ಹೊರಟ ಆಮ್ರಾಮ್‌ ಕ್ಷಿಪಣಿಯಿಂದ ತಪ್ಪಿಸಿಕೊಂಡ ಚಿತ್ರವನ್ನು ಬಿಡಿಸಲಾಗಿದೆ. ಯೋಧರ ಕುರಿತಾದ ವಿವರಗಳನ್ನು ನೀಡಲು ಬಟ್ಟೆಯಿಂದ ಮಾಡಿದ ಮುದ್ರೆಗಳನ್ನು ಸಮವಸ್ತ್ರಗಳಿಗೆ ಅಂಟಿಸಲಾಗುತ್ತದೆ.