ನ್ಯೂಯಾರ್ಕ್ (ಅ.06): ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ, ಅದನ್ನು ಪಡೆಯುವ ವ್ಯರ್ಥ ಪ್ರಯತ್ನಗಳನ್ನು ಕೈಬಿಡಿ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಆಗಿರುವ ಸೈಯದ್ ಅಕ್ಬರುದ್ದೀನ್ ಪಾಕಿಸ್ತಾನಕ್ಕೆ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹತ್ತು ದಿನಗಳ ಹಿಂದೆ ಜನರಲ್ ಅಸೆಂಬ್ಲಿ ಹಾಲ್’ನಲ್ಲಿ ನಡೆದ ಸಭೆಯಲ್ಲೂ ಪಾಕಿಸ್ತಾನದ ಆಧಾರರಹಿತ ವಾದಗಳಿಗೆ ಯಾವುದೇ ಬೆಂಬಲ ಸಿಗಲಿಲ್ಲ ಎಂಬುವುದನ್ನು ನೆನಪಿಸಿದ ಅಕ್ಬರುದ್ದೀನ್, “ಆ ವಿಚಾರದಲ್ಲಿ ಹೆಚ್ಚು ಹೇಳುವ ಅಗತ್ಯವಿಲ್ಲ, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ, ಅದನ್ನು ಪಡೆಯುವ ವ್ಯರ್ಥ ಪ್ರಯತ್ನಗಳನ್ನು ಕೈಬಿಡಿ” ಎಂದು ಹೇಳಿದ್ದಾರೆ.