Asianet Suvarna News Asianet Suvarna News

ಕೇಜ್ರಿವಾಲ್ ಮನೆಯಲ್ಲಿ 80 ಮಂದಿ ಊಟ ಮಾಡಿದ ಬಿಲ್ಲು ಮುಟ್ಟಿತು 11 ಲಕ್ಷಕ್ಕೆ?

ಕಳೆದ ವರ್ಷ ಕೇಜ್ರಿವಾಲ್ ನಿವಾಸದಲ್ಲಿ ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ಸಹಕಾರ(ಡಿಟಿಟಿಡಿಸಿ) ಏರ್ಪಡಿಸಿದ್ದ ಸರ್ಕಾರದ ವಾರ್ಷಿಕೋತ್ಸವದ 2 ದಿನಗಳ ಕಾರ್ಯಕ್ರಮಗಳಲ್ಲಿ 80 ಮಂದಿಯ ಔತಣಕೂಟಕ್ಕಾಗಿ ಒಂದು ಊಟಕ್ಕೆ 13 ಸಾವಿರ ರು.ನಂತೆ 11 ಲಕ್ಷ ವ್ಯಯ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ವಿಜೇಂದರ್ ಗುಪ್ತ ಆಪಾದಿಸಿದ್ದಾರೆ.

AAP spent Rs 11 lakh on food bills during anniversary celebrations

ನವದೆಹಲಿ(ಏ.09): ಸಾರ್ವಜನಿಕರ 11 ಲಕ್ಷವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದುರುಪಯೋಗ ಮಾಡಿದ್ದಾರೆ ಎಂದು ಬಿಜೆಪಿ ಗುರುತರ ಆರೋಪ ಮಾಡಿದೆ. ಹಾಗಾಗಿ, ಅವರು ರಾಜೀನಾಮೆ ನೀಡುವಂತೆಯೂ ಆಗ್ರಹಿಸಿದೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಆಪ್, ಸಾರ್ವಜನಿಕರ ಹಣ ದುರುಪಯೋಗವಾಗಿಲ್ಲ ಎಂದು ಹೇಳಿದೆ.

ಕಳೆದ ವರ್ಷ ಕೇಜ್ರಿವಾಲ್ ನಿವಾಸದಲ್ಲಿ ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ಸಹಕಾರ(ಡಿಟಿಟಿಡಿಸಿ) ಏರ್ಪಡಿಸಿದ್ದ ಸರ್ಕಾರದ ವಾರ್ಷಿಕೋತ್ಸವದ 2 ದಿನಗಳ ಕಾರ್ಯಕ್ರಮಗಳಲ್ಲಿ 80 ಮಂದಿಯ ಔತಣಕೂಟಕ್ಕಾಗಿ ಒಂದು ಊಟಕ್ಕೆ 13 ಸಾವಿರ ರು.ನಂತೆ 11 ಲಕ್ಷ ವ್ಯಯ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ವಿಜೇಂದರ್ ಗುಪ್ತ ಆಪಾದಿಸಿದ್ದಾರೆ.

ಆದರೆ, ವಿಪಕ್ಷದ ಆರೋಪವನ್ನು ದೆಹಲಿ ಡಿಸಿಎಂ ಮನಿಷ್ ಸಿಸೋಡಿಯಾ ಸಾರಸಗಟಾಗಿ ತಿರಸ್ಕರಿಸಿದ್ದಾರೆ. ‘ಪ್ರತಿ ಊಟಕ್ಕೆ 13 ಸಾವಿರ ಎನ್ನಲಾಗಿರುವ ಬಿಲ್‌ನ ೈಲ್ ಅನ್ನು ಅಕಾರಿಗಳು ಕಳೆದ ವರ್ಷ ಕಳುಹಿಸಿದ್ದರು. ಆದರೆ, ಅದಕ್ಕೆ ನಾನು ಅನುಮೋದನೆ ನೀಡಿಲ್ಲ. ಹಾಗಾಗಿ ಅವುಗಳನ್ನು ಅಂದು ಲೆಫ್ಟಿನೆಂಟ್ ಗವರ್ನರ್ ಆಗಿದ್ದ ನಜೀಬ್ ಜಂಗ್ ಕಚೇರಿಗೆ ಕಳುಹಿಸಲಾಗಿತ್ತು. ಆದರೆ, ಇದೀಗ ಬಿಜೆಪಿಯ ಒತ್ತಡದ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯೇ ದಾಖಲೆಗಳನ್ನು ಸೋರಿಕೆ ಮಾಡಿದೆ’ ಎಂದು ಮನಿಷ್ ಆರೋಪಿಸಿದ್ದಾರೆ. ಮುಂದಿನ ಎಂಸಿಡಿ ಚುನಾವಣೆ ಗಮನದಲ್ಲಿಟ್ಟುಕೊಂಡು ಆಪ್ ಸರ್ಕಾರವನ್ನು ಅಸ್ಥಿರಗೊಳಿಸುವಂಥ ದಾಖಲೆಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಈ ನಡುವೆ, ಸಾರ್ವಜನಿಕರಿಂದ ತೆರಿಗೆಯಿಂದ ಸಂಗ್ರಹಿಸಲಾದ ಬೊಕ್ಕಸದಲ್ಲಿರುವ ಹಣವನ್ನು ಸರ್ಕಾರ ಜವಾಬ್ದಾರಿಯಿಂದ ಬಳಕೆ ಮಾಡಬೇಕು. ಆದರೆ, ಸರ್ಕಾರದ ಬೊಕ್ಕಸದಲ್ಲಿರುವ ಸಾರ್ವಜನಿಕರ ಹಣವನ್ನು ಅರವಿಂದ್ ಕೇಜ್ರಿವಾಲ್ ತಮ್ಮ ರಾಜಕೀಯ ಭವಿಷ್ಯ ಮತ್ತು ಪಕ್ಷಕ್ಕಾಗಿ ಕಳೆದೆರಡು ವರ್ಷಗಳಿಂದ ದುರುಪಯೋಗ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೊಯೆಲ್ ದೂರಿದ್ದಾರೆ.

Latest Videos
Follow Us:
Download App:
  • android
  • ios