ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಪಕ್ಷಾಂತರವೂ ಮುಂದುವರಿದಿದೆ. ಹಾಲಿ ಶಾಸಕರೋರ್ವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನವದೆಹಲಿ: ಆಪ್ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್‌ಗೆ ಮತ್ತೊಂದು ಮುಖಭಂಗವಾಗಿದ್ದು, ಆಪ್‌ನ ಬಿಜ್ವಾಸನ್ ಕ್ಷೇತ್ರದ ಶಾಸಕ ದೇವೇಂದ್ರ ಸಿಂಗ್ ಸೆಹರಾತ್ ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಆಮ್ ಆದ್ಮಿ ಪಾರ್ಟಿಯಿಂದ ಯಾರೊಬ್ಬರೂ ಬಿಜೆಪಿಗೆ ಸೇರಲ್ಲ ಎಂದು ಆಪ್ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಶುಕ್ರವಾರ ಹೇಳಿಕೆ ನೀಡಿದ ದಿನವೇ ಗಾಂಧಿನಗರದ ಆಪ್ ಶಾಸಕ ಅನಿಲ್ ಬಾಜಪಾಯಿ ಬಿಜೆಪಿ ಸೇರಿಕೊಂಡಿದ್ದರು.
ಕಳೆದೊಂದು ವಾರದಲ್ಲಿ ಆಪ್‌ನ ಇಬ್ಬರು ಶಾಸಕರು ಕಮಲದತ್ತ ಮುಖ ಮಾಡಿದ್ದಾರೆ.
