ಮುಂಬೈ: ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಜೊತೆ ಬಿಜೆಪಿ ಮೈತ್ರಿ ಮುಂದುವರೆಯಲಿದೆ. ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ  ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಎನ್ನಲಾಗುತ್ತಿದೆ. 

ಉದ್ದವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಪಕ್ಷದ ವಕ್ತಾರ ಸಂಜಯ್ ರಾವುತ್ ಈ ಬಗ್ಗೆ ಸುಳಿವು ನೀಡಿದ್ದಾರೆ. 

 ಸದ್ಯ ವಿಧಾನಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಎರಡು ಪಕ್ಷಗಳು ಸಜ್ಜಾಗುತ್ತಿದ್ದು,  ಎಂದಿಗೂ ಡೆಪ್ಯೂಟಿ ಸ್ಥಾನಕ್ಕೆ ತೆರಳುವ ಯೋಜನೆಯಿಲ್ಲ. ಸಿಎಂ ಸ್ಥಾನಕ್ಕೆ ಮಾತ್ರವೇ ಬೇಡಿಕೆ ಎಂದಿದ್ದಾರೆ. 

ಇನ್ನು ಮೈತ್ರಿಯಲ್ಲಿ ಚುನಾವಣೆ ಎದುರಿಸುವ ಕಾರಣ ಸೀಟು ಹಂಚಿಕೆ ಬಗ್ಗೆ ಶೀಘ್ರದಲ್ಲೇ ಉಭಯ ಪಕ್ಷಗಳ ಮುಖಂಡರು ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿದ್ದಾರೆ.

ಈ ವರ್ಷದ ಅಂತ್ಯದ ಒಳಗೆ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.