Asianet Suvarna News Asianet Suvarna News

ಆಧಾರ್ ಕಡ್ಡಾಯ; ಕಪಿಲ್ ಸಿಬಲ್ ಅಸಮಾಧಾನ

ತೆರಿಗೆ ರಿಟರ್ನ್ಸ್ ಮತ್ತು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸ ಹೊರಟಿರುವ ಸರ್ಕಾರದ ಬಗ್ಗೆ  ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸುತ್ತಾ, ಸರ್ಕಾರವು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಎಂದರು. ಈ ಸಂಬಂಧ ವಿತ್ತ ಸಚಿವ ಅರುಣ್ ಜೇಟ್ಲಿಯವರಿಂದ ಸಮಜಾಯಿಷಿ ಕೇಳಿದರು.

Aadhar meant for tracking PDS not prying into activities of others Kapil Sibal in Rajya Sabha

ನವದೆಹಲಿ (ಮಾ.27): ತೆರಿಗೆ ರಿಟರ್ನ್ಸ್ ಮತ್ತು ಪಾನ್ ಕಾರ್ಡ್ ಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸ ಹೊರಟಿರುವ ಸರ್ಕಾರದ ಬಗ್ಗೆ  ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸುತ್ತಾ, ಸರ್ಕಾರವು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದರು. ಈ ಸಂಬಂಧ ವಿತ್ತ ಸಚಿವ ಅರುಣ್ ಜೇಟ್ಲಿಯವರಿಂದ ಸಮಜಾಯಿಷಿ ಕೇಳಿದರು.

ಆಧಾರ್ ಕಾರ್ಡ್ ಡಾಟಾಗಳನ್ನು ಹ್ಯಾಕ್ ಮಾಡಿ ಬ್ಯಾಂಕ್ ವ್ಯವಹಾರಗಳನ್ನು ನಡೆಸಬಹುದು. ಆ ವ್ಯಕ್ತಿಯ ಪ್ರಯಾಣದ ದಾಖಲೆಗಳು, ವೈಯಕ್ತಿಕ ವಿವರಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಪೆಂಟಗಾನನ್ನು ಹ್ಯಾಕ್ ಮಾಡಿರುವಾಗ ಇದನ್ನೇಕೆ ಮಾಡಲು ಸಾಧ್ಯವಾಗಲಾರದು? ಎಂದು ಕಲಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.

ಯುಪಿಎ ಸರ್ಕಾರವಿದ್ದಾಗ, ಸರ್ಕಾರದ ಯೋಜನೆಗಳು, ಪಿಡಿಎಸ್, ಸಬ್ಸಿಡಿಗಳು ಜನರಿಗೆ ತಲುಪುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಆಧಾರ್ ಕಾರ್ಡನ್ನು ಜಾರಿಗೆ ತರಲಾಗಿತ್ತು. ಆದರೆ ಇದೀಗ ಬೇರೆ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ನಾವು ಪೊಲೀಸ್ ರಾಜ್ಯದಲ್ಲಿ ಬದುಕುತ್ತಿದ್ದೇವೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.  

Follow Us:
Download App:
  • android
  • ios