ಆಕ್ಸ್’ಫರ್ಡ್’ಗೆ ಆಧಾರ್..!

Aadhaar Word In Oxford Dictionarys
Highlights

ಆಕ್ಸ್‌ಫರ್ಡ್ ಅರ್ಥಕೋಶದ ಹಿಂದಿ ಪದಗಳ ಪಟ್ಟಿಯ 2017ರ ಸಾಲಿನಲ್ಲಿ ‘ಆಧಾರ್’ ವರ್ಷದ ಹಿಂದಿ ಪದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಧಾರ್ ಕಾರ್ಡ್ ಕಾರಣದಿಂದಾಗಿ ಈ ಪದ ಜನಪ್ರಿಯವಾಗಿದ್ದು, ಕಳೆದ ವರ್ಷ ವ್ಯಾಪಕ ಸುದ್ದಿಯಲ್ಲಿತ್ತು ಮತ್ತು ವರ್ಷದ ಪ್ರಮುಖ ಪದವಾಗಿ ಗುರುತಿಸಲ್ಪಟ್ಟಿತ್ತು.

ಜೈಪುರ: ಆಕ್ಸ್‌ಫರ್ಡ್ ಅರ್ಥಕೋಶದ ಹಿಂದಿ ಪದಗಳ ಪಟ್ಟಿಯ 2017ರ ಸಾಲಿನಲ್ಲಿ ‘ಆಧಾರ್’ ವರ್ಷದ ಹಿಂದಿ ಪದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಧಾರ್ ಕಾರ್ಡ್ ಕಾರಣದಿಂದಾಗಿ ಈ ಪದ ಜನಪ್ರಿಯವಾಗಿದ್ದು, ಕಳೆದ ವರ್ಷ ವ್ಯಾಪಕ ಸುದ್ದಿಯಲ್ಲಿತ್ತು ಮತ್ತು ವರ್ಷದ ಪ್ರಮುಖ ಪದವಾಗಿ ಗುರುತಿಸಲ್ಪಟ್ಟಿತ್ತು.

ಜೈಪುರ ಸಾಹಿತ್ಯ ಉತ್ಸವದಲ್ಲಿ ಆಕ್ಸ್‌ಫರ್ಡ್ ಪದಕೋಶಗಳ ‘ವರ್ಷದ ಹಿಂದಿ ಪದ’ಗಳ ಘೋಷಣೆ ನಡೆಯಿತು. ಇನ್ನುಳಿದಂತೆ ಮಿತ್ರೋ, ನೋಟ್‌ಬಂದಿ, ಗೋರಕ್ಷಕ ಪದಗಳೂ ಪಟ್ಟಿಯಲ್ಲಿ ಪರಿಗಣಿಸಲ್ಪಟ್ಟಿವೆ. ಆದರೆ ವ್ಯಾಪಕ ಚರ್ಚೆಗೆ ಬಂದಿದ್ದ ಹಿನ್ನೆಲೆಯಲ್ಲಿ ‘ಆಧಾರ್’ ವರ್ಷದ ಪದವಾಗಿ ಆಯ್ಕೆಯಾಗಿದೆ.

loader